ಬೆಂಗಳೂರು: ಚಿತ್ರಕಲಾ ಪರಿಷತ್ನಲ್ಲಿ ಇಂಡಿಯನ್ ಆರ್ಟ್ ಫೆಸ್ಟಿವಲ್ ಇಂದಿನಿಂದ ಶುರುವಾಗಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಾಲನೆ ಕೊಟ್ಟರು. ಬಳಿಕ ಮಾತಾನಾಡಿದ ಅವರು, ಕಲಾಕೃತಿಗಳು ಕಣ್ಣಿಗೆ ಹಾಗೂ ಮನಸ್ಸಿಗೆ ನೆಮ್ಮದಿ, ಸಂತೋಷ ಕೊಡುತ್ತವೆ. ನಮ್ಮ ದೇಶದ ಪ್ರಸಿದ್ಧ ಕಲಾವಿದರು, ಹೆಸರು ಮಾಡಿರುವ ಕಲಾವಿದರು ಬಂದಿದ್ದು, ಅವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಈ ಕಲಾಕೃತಿಗಳನ್ನು ನೋಡಲು ಸಂತೋಷವಾಗ್ತಿದೆ ಎಂದರು.
ಈಗಿನ ರಾಜಕೀಯದಲ್ಲಿ ಆಗ್ತಿರುವ ಬೆಳವಣಿಗೆ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ 90 ವರ್ಷ ಆಯ್ತು, ಸದ್ಯಕ್ಕೆ ವಿಶ್ರಾಂತಿ ಬೇಕು ಎಂದರು. ಈ ಭಾರತ ಕಲಾ ಉತ್ಸವದಲ್ಲಿ ದೇಶದ ಪ್ರತಿಷ್ಠಿತ 25 ಕಲಾ ಗ್ಯಾಲರಿಗಳು ಮತ್ತು 100ಕ್ಕೂ ಅಧಿಕ ಖ್ಯಾತ ಕಲಾವಿದರು ಹಾಗೂ 300 ಉತ್ಸಾಹಿ ಮತ್ತು ಯುವ ಕಲಾವಿದರು ಭಾಗವಹಿಸಿದ್ದಾರೆ.
Laxmi News 24×7