ನವದೆಹಲಿ, ಏ.29- ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ಪ್ರತಿ ದಿನ 350 ಮಂದಿ ಭಾರತದ ನಾಗರೀಕತ್ವ ತೊರೆದು ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.
ನಿರುದ್ಯೋಗ ಹೆಚ್ಚಳ, ವ್ಯಾಪಾರ ಮಾಡಲು ಕ್ಲಿಷ್ಟಕರ ವಾತಾವರಣ, ವಿಫಲ ಆರ್ಥಿಕತೆ, ಸಾಮಾಜಿಕ ತಾರತಮ್ಯದಿಂದ ಬೇಸರಗೊಂಡ ಲಕ್ಷಾಂತರ ಮಂದಿ ದೇಶ ಬಿಟ್ಟು ಹೋಗುತ್ತಿದ್ದಾರೆ.
ಈವರೆಗೂ ಒಟ್ಟು 8.81 ಲಕ್ಷ ಮಂದಿ ಭಾರತದ ನಾಗರೀಕತ್ವ ತೊರೆದಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ಆರ್‍ಎಸ್‍ಎಸ್ ಜೊತೆಗೂಡಿ ಜನ ವಿಭಜನೆಗೊಳ್ಳಲು ಹಲವು ಕೊಡುಗೆಗಳನ್ನು ನೀಡಿದೆ. ಅದಕ್ಕಾಗಿ ಲಕ್ಷಾಂತರ ಮಂದಿ ಭಾರತದ ನಾಗರೀಕತ್ವ ತೊರೆದು ಹೋಗುವಂತಾಗಿದೆ ಎಂದು ಅವರ ಆಕ್ಷೇಪಿಸಿದ್ದಾರೆ.