Breaking News

ಚಿಂಚನಸೂರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಪ್ರಶ್ನೆಗೆ ಹಾಲಪ್ಪ ಆಚಾರ್ ಹೇಳಿದ್ದು ಹೀಗೆ..!

Spread the love

ರಾಯಚೂರು: ಕಳೆದ ಕೆಲವು ದಿನಗಳಿಂದ ಬಾಬೂರಾವ್ ಚಿಂಚನೂರ್ ಮತ್ತೆ ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಮಾತಿದೆ. ಈ ಬಗ್ಗೆ ಸಚಿವ ಹಾಲಪ್ಪ ಆಚಾರ್ ಮಾತನಾಡಿದ್ದು, ಹೋಗೋರಿಗೆ, ಬರುವವರಿಗೆ ಬಾಗಿಲು ಯಾರು ಮುಚ್ಚೋದಕ್ಕೆ ಆಗುತ್ತೆ.

ತೆಗೆಯೋದಕ್ಕೆ ಆಗುತ್ತೆ. ಬಹುಶಃ ಅವರು ಹೋಗುವುದಿಲ್ಲ. ಇವತ್ತು ಕೂಡ ನನ್ನ ಜೊತೆಯಲ್ಲಿ ಸಭೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ವಿಚಾರ ಸುಳ್ಳು ಎಂದಿದ್ದಾರೆ.

ಇದೆಲ್ಲಾ ಯಾರೋ ಹೇಳಿರುವ ವಿಚಾರವಿರಬಹುದು. ಬಿಜೆಪಿ ಪಾರ್ಟಿಯ ಸಿದ್ದಾಂತವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು, ತಿಳಿದುಕೊಂಡು ಬಂದಿದ್ದಾರೆ. ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರೆ. ಪಕ್ಷ ಬಿಟ್ಟು ಹೋಗುವ ಪ್ರಶ್ನೆಯಿಲ್ಲ ಅಂತ ತಿಳಿದುಕೊಂಡಿದ್ದೀ‌ನಿ ಎಂದಿದ್ದಾರೆ.

ಇನ್ನು ನಮ್ಮ ಪಕ್ಷಕ್ಕೆ ಯಾರೆ ಬಂದರೂ ಸ್ವಾಗತ ಮಾಡುತ್ತೇನೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಈಗ ಅವರು ಎಂಪಿಯಾಗಿದ್ದಾರೆ. ಡೆಲ್ಲಿ ಮಟ್ಟದಲ್ಲಿದ್ದಾರೆ. ಬರುವುದು ಬಿಡುವುದು ಅವರಿಗೆ ಬಿಟ್ಟದ್ದು. ಬರ್ತೀವಿ ಎಂದರೆ ಈ ಪಕ್ಷದ ಬಾಗಿಲು ಸದಾ ತೆಗೆದಿರುತ್ತದೆ. ನಮ್ಮ ಪಕ್ಷ ಮುಚ್ಚಿದ ಬಾಗಿಲಲ್ಲ. ಆದರೆ ಬರುವುದಕ್ಕೂ ಮುನ್ನ ನಮ್ಮ ಪಕ್ಷದ ವಿಚಾರಗಳನ್ನು ತಿಳಿದುಕೊಂಡು ಬರಬೇಕಾಗುತ್ತದೆ ಎಂದು ಸುಮಲತಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


Spread the love

About Laxminews 24x7

Check Also

ರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಅದಲು ಬದಲಾದ ಆರೋಪ

Spread the loveರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಇಬ್ಬರು ಮಹಿಳೆಯರಿಗೆ ಹೆರಿಗೆಯಾಗಿದ್ದು, ಇವೆರಡು ಮಕ್ಕಳನ್ನು ಸಿಬ್ಬಂದಿ ಅದಲು-ಬದಲು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ