Breaking News

ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್​ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ

Spread the love

ದಿವ್ಯಾಗಾಗಿ ಕಲಬುರಗಿಯಿಂದ ಕಾಶ್ಮೀರದವರೆಗೂ ಸಿಐಡಿ ತಂಡವು ಹುಡುಕಾಟ ನಡೆಸಿತ್ತು. ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗಿದ್ದ ದಿವ್ಯಾ ಹಾಗರಗಿ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿ ಅಕ್ರಮದ ಸಾಕ್ಷ್ಯ ಸಿಐಡಿಗೆ ಸಿಕ್ಕ ನಂತರ ನಾಪತ್ತೆಯಾಗಿದ್ದರು.

ಹೇಗೆ ನಡೆಯಿತು ಅಕ್ರಮ?
ಪೋಲಿಸರ ತನಿಖೆ ವೇಳೆ ಪಿಎಸ್​ಐ ನೇಮಕಾತಿ ಅಕ್ರಮ ಹೇಗೆ ನಡೆಯಿತು ಎಂಬ ಮಾಹಿತಿ ಬಹಿರಂಗವಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೇ ಪಿಎಸ್‌ಐ ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನೀಡುತ್ತಿದ್ದ ಒಎಂಆರ್​ನ ನಕಲು ಪ್ರತಿಗಳನ್ನು ಸಿಬ್ಬಂದಿ ಪಡೆಯುತ್ತಿದ್ದರು. ಇದೇ ಅನುಮಾನದ ಹಿನ್ನಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಐಡಿ ವಿಸ್ತೃತ ವಿಚಾರಣೆಗೆ ಒಳಪಡಿಸಿತ್ತು. ಲಕ್ಷ-ಲಕ್ಷ ಹಣ ನೀಡಿದವರಿಗೆ ಪರೀಕ್ಷೆ ಪ್ರಾರಂಭವಾಗುವುದಕ್ಕೆ 15-20 ನಿಮಿಷ ಮೊದಲು ಉತ್ತರಗಳು ಲಭ್ಯವಾಗುತ್ತಿದ್ದವು. ಪೊಲೀಸ್ ಸಿಬ್ಬಂದಿಯ ಮಗನೊಬ್ಬನ ಚಲನವಲನ ಗಮನಿಸಿದ್ದ ಸ್ಥಳೀಯ ವ್ಯಕ್ತಿ ಅನುಮಾನಗೊಂಡು ದೂರು ನೀಡಿದ್ದ. ಅವನ ವಿಚಾರಣೆ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದಿದ್ದವು.

ಅಕ್ರಮದಲ್ಲಿ ಭಾಗಿಯಾಗಿರುವ ಮೇಲ್ವಿಚಾರಕರು ಪರೀಕ್ಷಾರ್ಥಿಗಳಿಂದ ಒಎಂಆರ್​ ಶೀಟ್​ಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ‌ ಮೇಲ್ವಿಚಾರಕರೇ ಉತ್ತರಗಳನ್ನು ಒಎಂಆರ್​ ಶೀಟ್​ಗೆ ಎಂಟ್ರಿ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.

ಈ ಎಲ್ಲ ಅಕ್ರಮಗಳಿಗೆ ದಿವ್ಯಾ ಹಾಗರಗಿ ಒಡೆತನ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯೇ ಕೇಂದ್ರ ಸ್ಥಾನವಾಗಿತ್ತು. ಕಿಂಗ್​ಪಿನ್ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ ಜೊತೆ ಡೀಲ್ ಮಾಡಿಕೊಂಡಿದ್ದ ದಿವ್ಯಾ ಹಾಗರಗಿ ತನ್ನ ಪ್ರಭಾವವನ್ನು ಬೀರಿ, ತನ್ನ ಶಾಲೆಗೆ ಪರೀಕ್ಷಾ ಕೇಂದ್ರವನ್ನು ಮಜೂರು ಮಾಡಿಸಿಕೊಂಡಿದ್ದರು. ತನ್ನ ಶಾಲೆಯ ಸಿಬ್ಬಂದಿಯನ್ನೇ ಅಕ್ರಮ ಚಟುವಟಿಕೆಗಳಿಗೂ ಬಳಸಿಕೊಂಡಿದ್ದರು. ಪ್ರಶ್ನಪತ್ರಿಕೆಯನ್ನು ಕಿಂಗ್​ಪಿನ್​ಗಳಿಗೆ ಕಳಿಸಿದ್ದ ಇವರು, ಪರೀಕ್ಷೆ ಮುಗಿದ ನಂತರ ಒಎಂಆರ್​ ಶೀಟ್​ಗಳಲ್ಲಿ ಅಭ್ಯರ್ಥಿಗಳ ಪರವಾಗಿ ಉತ್ತರಗಳನ್ನು ತುಂಬಿದ್ದರು.

ಇಂದು ನಿರೀಕ್ಷಣಾ ಜಾಮೀನು ವಿಚಾರಣೆ

ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರಿಗೆ ಸೆರೆ ಸಿಕ್ಕಿರುವ ಪಿಎಸ್​ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮತ್ತು ಸಹಚರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯು ಇಂದು ಕಲಬುರಗಿ ಜಿಲ್ಲಾ ಹೆಚ್ಚುವರಿ 1ನೇ ಕೋರ್ಟ್​ನಲ್ಲಿ ನಡೆಯಲಿದೆ. ಎರಡು ದಿನಗಳ ಹಿಂದೆಯಷ್ಟೇ ಇವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ