ಆರೋಪಿ ತಿರುಪತಿ ಪತ್ನಿ ಜೊತೆ ಮೃತ ತಿರುಪತಿ ಅನೈತಿಕ ಸಂಬಂಧ ಹೊಂದಿದ್ದ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಬಿಡುವಂತೆ ಆರೋಪಿ ತಿರುಪತಿ ಬೇಡಿಕೊಂಡಿದ್ದ. ಇಡೀ ಊರಿಗೆ ವಿಷಯ ಗೊತ್ತಾಗುತ್ತಿದೆ ತನ್ನ ಪತ್ನಿ ಸಹವಾಸ ಬಿಡುವಂತೆ ಮನವಿ ಮಾಡಿದ್ದ.ರಾಯಚೂರು: ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಅನಾಥ ಹೆಣವಾದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬಣಕಲ್ನಲ್ಲಿ ನಡೆದಿದೆ.
ಗೆಳೆಯ ಕೈಕಾಲು ಬಿದ್ದರೂ ಅನೈತಿಕ ಸಂಬಂಧ ಬಿಡದ ಹಿನ್ನೆಲೆ ಕೊನೆಗೆ ಪಾರ್ಟಿ ಎಂದು ಕರೆಸಿ ಗೆಳೆಯನ ಬರ್ಬರ ಹತ್ಯೆ ಮಾಡಲಾಗಿದೆ. ತಿರುಪತಿ (32) ಹತ್ಯೆಯಾದ ವ್ಯಕ್ತಿ. ಕೊಲೆ ಸಂಬಂಧ ದೇವದುರ್ಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಸಹೋದರರಾದ ತಿರುಪತಿ ಹಾಗೂ ರಾಮಣ್ಣ ಬಂಧಿತರು. ಆರೋಪಿ ತಿರುಪತಿ ಹಾಗೂ ಮೃತ ತಿರುಪತಿ ಇಬ್ಬರು ಸ್ನೇಹಿತರು. ಇಬ್ಬರು ದೇವದುರ್ಗ ತಾಲೂಕಿನ ಅರಸಣಗಿ ಗ್ರಾಮದ ನಿವಾಸಿಗಳು. ಆರೋಪಿ ತಿರುಪತಿ ಪತ್ನಿ ಜೊತೆ ಮೃತ ತಿರುಪತಿ ಅನೈತಿಕ ಸಂಬಂಧ ಹೊಂದಿದ್ದ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಬಿಡುವಂತೆ ಆರೋಪಿ ತಿರುಪತಿ ಬೇಡಿಕೊಂಡಿದ್ದ. ಇಡೀ ಊರಿಗೆ ವಿಷಯ ಗೊತ್ತಾಗುತ್ತಿದೆ ತನ್ನ ಪತ್ನಿ ಸಹವಾಸ ಬಿಡುವಂತೆ ಮನವಿ ಮಾಡಿದ್ದ. ಕೊನೆಗೆ ಕೈ-ಕಾಲು ಹಿಡಿದುಕೊಂಡು ಬೇಡಿಕೊಂಡರೂ ಮೃತ ತಿರುಪತಿ ಅನೈತಿಕ ಸಂಬಂಧ ಮುಂದುವರೆಸಿದ್ದ. ಇದೇ ದ್ವೇಷ ಹೊಂದಿದ್ದ ಆರೋಪಿ ತಿರುಪತಿ ಹಾಗೂ ಆತನ ಅಣ್ಣ ರಾಮಣ್ಣ ಇದೇ ಏಪ್ರಿಲ್ 11 ರಂದು ಬೆಣಕಲ್ ಗ್ರಾಮಕ್ಕೆ ನಾಟಕ ನೋಡಲು ಹೋಗಿದ್ದ ವೇಳೆ ಪ್ಲಾನ್ ಮಾಡಿ, ಪಾರ್ಟಿ ಮಾಡಿಸಿ ಪಾರ್ಟಿ ಬಳಿಕ ತಿರುಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಮೃತನ ಗುರುತು ಪತ್ತೆಯಾಗದ ಹಿನ್ನೆಲೆ ಪೊಲೀಸರು ಮೃತನ ಫೋಟೋಸ್ ವೈರಲ್ ಮಾಡಿದ್ದರು. ಬಳಿಕ ಆತನ ಕಾಲಿನಲ್ಲಿದ್ದ ದಾರದ ಆಧಾರದಲ್ಲಿ ಗುರುತು ಪತ್ತೆಯಾಗಿದೆ. ಈ ಬಗ್ಗೆ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.