ಬೆಂಗಳೂರು, ಏ. 27: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ವಕೀಲ ಕೆ.ಎನ್. ಜಗದೀಶ್ ನಡುವೆ ಎರಡನೇ ಹಂತದ ‘ವಾರ್’ ಶುರುವಾಗಿದೆ. ರವಿ ಡಿ. ಚನ್ನಣ್ಣನವರ್ ಅವರ ಸಹೋದರ ರಾಘವೇಂದ್ರ ಡಿ. ಚನ್ನಣ್ಣನವರ್ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಸಂಬಂಧ ಆತನ ಪತ್ನಿ ರೋಜಾ ಎಂಬುವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನೊಂದ ಮಹಿಳೆ ಬೆಂಬಲಕ್ಕೆ ನಿಲ್ಲುವ ಮೂಲಕ ವಕೀಲ ಕೆ.ಎನ್.
ಜಗದೀಶ್ ಎರಡನೇ ಹಂತದ ಸಮರ ಆರಂಭಿಸಿದ್ದಾರೆ.
ರವಿ ಡಿ. ಚನ್ನಣ್ಣವರ್ ವಿರುದ್ಧ ದೂರು:
ಐಪಿಎಸ್ ಅಧಿಕಾರಿ ರವಿ. ಡಿ. ಚನ್ನಣ್ಣನವರ್ ಸಹೋದರ ರಾಘವೇಂದ್ರ ಡಿ. ಚನ್ನಣ್ಣನವರ್ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆತನ ಪತ್ನಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಿಶೇಷ ಅಂದ್ರೆ ಐಪಿಎಸ್ ಅಧಿಕಾರಿ ರಾಘವೇಂದ್ರ ಡಿ. ಚನ್ನಣ್ಣ ಅವರ ವಿರುದ್ಧ ಸಹ ದೂರು ನೀಡಲಾಗಿದೆ. ಇದರಿಂದ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ಅವರ ಸಹೋದರನಿಗೆ ಸಂಕಷ್ಟ ಎದುರಾಗಿದೆ.