ಹೌದು, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ಐ -PSI) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರ ದಿವ್ಯಾ ಹಾಗರಗಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ. ಕಲಬುರಗಿ 3ನೇ JMFC ಕೋರ್ಟ್ನಿಂದ ವಾರಂಟ್ ಜಾರಿ ಮಾಡಲಾಗಿದೆ. ಮುಂಬೈ ದಾಳಿ ವೇಳೆ 1993 (Mumbai Blast Case) ದಾವೂದ್ಗೂ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿತ್ತು. ದಾವುದ್ ಇಬ್ರಾಹಿಂಗೂ (Dawood Ibrahim) ಕೋರ್ಟ್ ವಾರಂಟ್ ಜಾರಿ ಮಾಡಿದ್ದನ್ನು ಉಲ್ಲೇಖಿಸಿ, ಈ ಪ್ರಕರಣದಲ್ಲಿಯೂ ಆರೋಪಿಗಳಿಗೆ ಸಿಐಡಿ ಪೊಲೀಸರು ವಾರಂಟ್ ಕೋರಿದ್ದರು. ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಅರ್ಚನಾ, ಕಾಶಿನಾಥ್, ರವೀಂದ್ರ, ಶಾಂತಿಬಾಯಿಗೆ ವಾರಂಟ್ ಜಾರಿ ಮಾಡಲಾಗಿದೆ. 1 ವಾರದೊಳಗೆ ಸಿಐಡಿ ಮುಂದೆ ಶರಣಾಗುವಂತೆ ವಾರಂಟ್ ನಲ್ಲಿ ಸೂಚನೆ ನೀಡಲಾಗಿದೆ.
ತನಿಖೆಯ ಅವಧಿಯಲ್ಲಿಯೇ ಆರೋಪಿಗಳಿಗೆ ಅರೆಸ್ಟ್ ವಾರೆಂಟ್:
ಪಿ.ಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ದಿವ್ಯಾ ಸೇರಿ 6 ಜನ ಆರೋಪಿಗಳಿಗೆ ತನಿಖೆ ಅವಧಿಯಲ್ಲಿಯೇ ಆರೋಪಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಅಪರೂಪವಾದ ಪ್ರಕರಣ ಇದಾಗಿದೆ. ಮುಂಬೈ ಬ್ಲಾಸ್ಟ್ ಸಂದರ್ಭದಲ್ಲಿ ದಾವುದ್ ಇಬ್ರಾಹಿಂ ಗೆ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿತ್ತು ಎಂದು ಆ ಪ್ರಕರಣ ಉಲ್ಲೇಖಿಸಿ, ಆರೋಪಿಗಳ ವಿರುದ್ಧಸಿಐಡಿ ಪೊಲೀಸರು ಅರೆಸ್ಟ್ ವಾರೆಂಟ್ ಕೋರಿದ್ದರು. ಕಲಬುರಗಿಯ 3ನೇ JMFC ಕೋರ್ಟ್ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಆರೂ ಜನರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.