ವಿಜಯಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆಯೇ ವೇದಿಕೆಯಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ನಡೆದಿದೆ.
ಸಧ್ಯ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕ ಯತ್ನಾಳ್, ‘ಮುಂದಿನ ಬಾರಿಯೂ ಬೊಮ್ಮಾಯಿಯವರೇ ಸಿಎಂ ಆಗ್ತಾರೆ.
ಬೊಮ್ಮಾಯಿ ಮತ್ತೆ ಸಿಎಂ ಆದ್ರೆ ನಮಗೇನು ತಕರಾರು ಇಲ್ಲ’ ಎಂದರು. ಆಗ ಯತ್ನಾಳ್ ಮಾತಿಗೆ ಸಿಎಂ ಬೊಮ್ಮಾಯಿ ಕೂಡ ಕೈಮುಗಿದ ನಸು ನಕ್ಕರು. ಮಾತು ಮುಂದುವರೆಸಿದ ಶಾಸಕ, ನಮ್ಮದೇನಾದರೂ ತಕರಾರು ಇದೆ ಅಂತಾ ತಿಳಿದುಕೊಂಡ್ರಾ? ಎಂದು ಸಿಎಂರನ್ನ ಪ್ರಶ್ನಿಸಿದರು. ನಾನು ಏನು ಆಗಲ್ಲ ಅಂತಾದ ಮೇಲೆ ತಕರಾರು ಯಾಕೆ? ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದರು