ಗುಂಡ್ಲುಪೇಟೆ (ಚಾಮರಾಜನಗರ): ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಸೋಮವಾರ ನಡೆದಿದೆ.
ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ವ್ಯಕ್ತಿ.
ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿರುವ ಸಾಲದ ಮಾಹಿತಿ ಹಾಗೂ ನನ್ನ ಸಾವಿಗೆ ನಾನೇ ಕಾರಣ, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ.