ಬೆಳಗಾವಿ: ನಗರದ ಸತ್ಯಸಾಯಿ ಕಾಲೋನಿಯಲ್ಲಿ ಏಪ್ರಿಲ್ 17ರಂದು ಕಾಲೋನಿಯ ನಿವಾಸಿ ಮಹಮ್ಮದ್ ದಿಲ್ ಫುಕಾರ್ ಶೇಖ್ (27) ಎಂಬಾತನ್ನನು ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿ ದುಷ್ಕರ್ಮಿ ಎಸ್ಕೇಪ್ ಆಗಿದ್ದ. ಸಂಜೆ ಎಂಟು ಗಂಟೆ ಸುಮಾರಿಗೆ ಕಾಲೋನಿಯ ಪಕ್ಕದ ಚರಂಡಿಯ ಮೇಲೆ ಬಿದ್ದಿದ್ದ ಮಹಮ್ಮದ್ ದಿಲ್ ಫುಕಾರ್ ನನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸುರೋವಾಗ ತೀವ್ರ ರಕ್ತಸ್ರಾವದಿಂದ ಮಹಮ್ಮದ್ ದಿಲ್ ಫುಕಾರ್ ಸಾವನ್ನಪ್ಪಿದ್ದಾನೆ.
ಮಹಮ್ಮದ್ ಊರು ಊರು ಅಲೆದು ಸ್ಕ್ರಾಪ್ ಕಲೆಕ್ಟ್ ಮಾಡಿ ಪ್ಲಾಸ್ಟಿಕ್ ಸಾಮಾಗ್ರಿಗಳನ್ನ ಮಾರಾಟ ಮಾಡುವ ಕೆಲಸ ಮಾಡ್ತಿದ್ದ. ಮದುವೆಯಾಗಿ ನಾಲ್ಕು ಮಕ್ಕಳಿರುವ ಮಹಮ್ಮದ್ಗೆ ಕುಡಿತದ ಚಟ ಕೂಡ ಇತ್ತು. ಅದಕ್ಕಾಗಿ ತನ್ನದೇ ಕಾಲೋನಿಯ ಕೆಲ ಹುಡುಗರ ಜತೆಗೆ ಸೇರಿಕೊಂಡು ಆಗಾಗಾ ಎಣ್ಣೆ ಹೊಡೆಯುವುದನ್ನ ಕೂಡ ಮಹಮ್ಮದ್ ಮಾಡ್ತಿದ್ದ. ಇದೇ ಕುಡಿತದ ಚಟವೇ ಇದೀಗ ಮಹಮ್ಮದ್ನ ಜೀವವನ್ನೇ ತಗೆದುಕೊಂಡು ನಾಲ್ಕು ಮಕ್ಕಳು ಅನಾಥವಾಗುವಂತೆ ಮಾಡಿದೆ.
ಏಪ್ರಿಲ್ 17ರಂದು ಸ್ನೇಹಿತ ಹಾಗೂ ಮಹಮ್ಮದ್ ನಡುವೆ ಗಲಾಟೆ ನಡೆದು ನಂತರ ಸ್ನೇಹಿತನೇ ಮಹಮ್ಮದ್ ನನ್ನ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.
ಬಿಯರ್ ತರಸಿ ಉಳಿದ ಹಣ ವಾಪಾಸ್ ಕೇಳಿದ್ದಕ್ಕೆ ಹೆಣ ಬೀಳಿಸಿದ ಭೂಪ..!
ಇತ್ತ ಮೃತ ಮಹಮ್ಮದ್ ದಿಲ್ ಫುಕಾರ್ನ ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿ ಏಪ್ರಿಲ್ 17ರಂದು ರಾತ್ರಿಯೇ ಶವವನ್ನ ನೀಡಿದ್ದಾರೆ. ಕುಟುಂಬಸ್ಥರು ಅಂತ್ಯಸಂಸ್ಕಾರವನ್ನ ನೆರವೇರಿಸಿರಿಸಿದ್ದಾರೆ. ಅಷ್ಟಕ್ಕೂ ಇಲ್ಲಿ ಯಾವ ಕಾರಣಕ್ಕೆ ಮಹಮ್ಮದ್ ದಿಲ್ ಫುಕಾರ್ ಕೊಲೆಯಾಗಿದೆ ಅಂತಾ ಕೇಳಿದ್ರೇ ನೀವು ಕೂಡ ಶಾಕ್ ಆಗ್ತೀರಿ.
ಹೌದು, ಮೃತ ಮಹಮ್ಮದ್ ಶೇಖ್ ಮತ್ತು ಕೊಲೆ ಆರೋಪಿ ಉಸ್ಮಾನ್ ಲಾಲಸಾಬ್ ಇಬ್ಬರು ಒಂದೇ ಕಾಲೋನಿ ಜತೆಗೆ ಸ್ನೇಹಿತರು ಕೂಡ. ಸಂಜೆಯಾದರೆ ಅಲ್ಲೇ ಕಾಲೋನಿಯ ಪಕ್ಕದಲ್ಲೇ ಕುಳಿತು ಕುಡಿದು ಮನೆ ಸೇರುತ್ತಾರೆ. ಏಪ್ರಿಲ್ 17ರಂದು ಸಂಜೆ ರೋಜಾ ಬಿಟ್ಟ ನಂತರ ಮಹಮ್ಮದ್ ಈ ಉಸ್ಮಾನ್ ನನ್ನ ಕರೆದು ಐದನೂರು ರೂಪಾಯಿ ಕೊಟ್ಟು ಎರಡು ಬಿಯರ್ ತರಲು ಹೇಳಿದ್ದಾನೆ. ಆತ ಎರಡು ಬಿಯರ್ ತಂದು ಮಹಮ್ಮದ್ ಕೈಗೆ ಕೊಟ್ಟಿದ್ದಾನೆ. ಐದನೂರು ರೂಪಾಯಿ ಕೊಟ್ಟಿದ್ದ ಮಹಮ್ಮದ್ ಉಳಿದ 250ರೂಪಾಯಿಯನ್ನ ಉಸ್ಮಾನ್ ಕಡೆ ವಾಪಾಸ್ ಕೇಳಿದ್ದಾನೆ. ಈ ವೇಳೆ ಉಸ್ಮಾನ್ 250ರೂ ವಾಪಾಸ್ ಕೊಡಲ್ಲಾ ಅಂದಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮಹಮ್ಮದ್ ಒಂದು ಏಟನ್ನ ಉಸ್ಮಾನ್ ಗೆ ಹೊಡೆದಿದ್ದಾನೆ. ಆಗ ಆಕ್ರೋಶಗೊಂಡ ಉಸ್ಮಾನ್ ಅಲ್ಲೇ ಇಟ್ಟಿದ್ದ ಬಿಯರ್ ಬಾಟಲ್ ದಿಂದ ತಲೆ ಭಾಗಕ್ಕೆ ಮಹಮ್ಮದ್ ಗೆ ಹೊಡೆದಿದ್ದಾನೆ. ಬಳಿಕ ಒಡೆದ ಬಿಯರ್ ಬಾಟಲ್‌ನಿಂದ ಮಹ್ಮದ್ ತೊಡೆ ಭಾಗಕ್ಕೆ ಚುಚ್ಚಿದ್ದಾನೆ.
ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಿದ ಎಪಿಎಂಸಿ ಪೊಲೀಸರು..!
ಈ ವೇಳೆ ನರ ಕಟ್ ಆಗಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನಂತೆ. ಇತ್ತ ಹತ್ಯೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಎಪಿಎಂಸಿ ಪೊಲೀಸರು ಇದೀಗ ಆರೋಪಿ ಉಸ್ಮಾನ್ ಲಾಲಸಾಬ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಾರೆ ದುಡಿದು ಜೀವನ ಕಟ್ಟಿಕೊಳ್ತಿದ್ದ ಮಹಮ್ಮದ್ ತಾನೇ ಹೊರಗೆ ಹೋಗಿ ಕುಡಿತ ಚಟ ಮಾಡ್ತಿದ್ರೇ ಇಂದು ಚಟಕ್ಕೇರುತ್ತಿರಲಿಲ್ಲ. ತನ್ನ ಶೋಕಿಗಾಗಿ ಇನ್ನೊಬ್ಬನ ಕಡೆಯಿಂದ ಡ್ರಿಂಕ್ಸ್ ತರೆಸಿಕೊಳ್ಳಲು ಹೋಗಿ ಆತನಿಂದಲೇ ಹತ್ಯೆಯಾಗಿದ್ದು ದುರ್ದೈವ. ಕೇವಲ 250ರೂಪಾಯಿಗಾಗಿ ಒಂದು ಜೀವವನ್ನೇ ತೆಗೆದ ಪಾಪಿ ಇದೀಗ ಜೈಲು ಸೇರಿದ್ದಾನೆ. ಆದ್ರೇ ಮೃತನ ಹೆಂಡತಿ ನಾಲ್ಕು ಮಕ್ಕಳು ಇದೀಗ ಅನಾಥವಾಗಿದ್ರೇ ಇಡೀ ಕುಟುಂಬವೇ ಮನೆ ಯಜಮಾನನ್ನ ಕಳೆದುಕೊಂಡು ಬೀದಿಗೆ ಬಂದಿದ್ದು ವಿಪರ್ಯಾಸವೇ ಸರಿ.