Breaking News

1441 ಎಲೆಕ್ಟ್ರಿಕಲ್​ ಬೈಕ್​ಗಳನ್ನು ಹಿಂಪಡೆದ ಓಲಾ!

Spread the love

ನವದೆಹಲಿ: ತಾಂತ್ರಿಕ ದೋಷ ಹಿನ್ನಲೆಯಲ್ಲಿ ಸ್ವಯಂಪ್ರೇರಿತವಾಗಿ ಒಲಾ ಕಂಪನಿ ತನ್ನ 1441 ಎಲೆಕ್ಟ್ರಿಕ್​ ಬೈಕ್​ಗಳನ್ನು ವಾಪಸ್​ ಪಡೆದಿದೆ.

ಇತ್ತೀಚೆಗೆ ಬೈಕ್​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚೆತ್ತ ತನ್ನ ಬೈಕ್​ಗಳ ತಾಂತ್ರಿಕ ಪರಿಶೀಲನೆಗೆ ಮುಂದಾಗಿದೆ.

ಘಟನೆ ಬಳಿಕ ಓಲಾ ಎಲೆಕ್ಟ್ರಿಕಲ್​ ಬೈಕ್​ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆ ಎದುರಾಗಿತ್ತು.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದಾಗಿ ಸ್ವಯಂಪ್ರೇರಿತವಾಗಿ ಎಲೆಕ್ಟ್ರಿಕ್​ ಬೈಕ್​ಗಳ ತಾಂತ್ರಿಕ ಸುಧಾರಣೆಯ ದೃಷ್ಟಿಯಿಂದ ಬೈಕ್​ಗಳನ್ನು ವಾಪಸ್​ ಪಡೆಯುತ್ತಿರುವುದಾಗಿ ತಿಳಿಸಿದೆ.

ಮಾರ್ಚ್​ 26 ರಂದು ಬೈಕ್​ನಲ್ಲಿ ಕಾಣಿಸಿಕೊಂಡಬೆಂಕಿ ತಾಂತ್ರಿಕ ದೋಷದಿಂದಲ್ಲ ಆದರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದೆ.

ಬೈಕ್​ನ ಬ್ಯಾಟರಿ ಸೇರಿದಂತೆ ಇತರೆ ತಾಂತ್ರಿಕ ದೋಷವಿದೆಯೇ ಎಂಬ ಬಗ್ಗೆ ನಮ್ಮ ಇಂಜಿನಿಯರ್​ ತಂಡದಿಂದ ಪರೀಕಷೆಗೊಳಪಡಿಸಲಾಗುವುದು ಎಂದು ಓಲಾ ತಿಳಿಸಿದೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ