ಹುಬ್ಬಳ್ಳಿ: ವಾಟ್ಸ್ಆಯಪ್ನಲ್ಲಿ ಎಡಿಟೆಡ್ ವಿಡಿಯೋವೊಂದನ್ನು ಸ್ಟೇಟಸ್ ಆಗಿ ಹಾಕಿಕೊಂಡಿದ್ದನ್ನೇ ನೆಪವಾಗಿಸಿಕೊಂಡು ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಈ ಮೂಲಕ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಐಎಂಐಎಂ ಪಕ್ಷದ ಮತ್ತೊಬ್ಬ ಮುಖಂಡನ ಬಂಧನ ಆದಂತಾಗಿದೆ. ಎಐಎಂಐಎಂ ನಗರ ಘಟಕದ ಅಧ್ಯಕ್ಷ ದಾದಾಪೀರ್ ಬೆಟಗೇರಿಯನ್ನು ಇಂದು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಎಐಎಂಐಎಂ ಪಕ್ಷದ ಮುಖಂಡ, ಕಾರ್ಪೋರೇಟರ್ ನಜೀರ್ ಅಹ್ಮದ್ ಹೊನ್ಯಾಳ ಎಂಬಾತನ್ನನು ಪೊಲೀಸರು ಬಂಧಿಸಿದ್ದರು. ಗಲಭೆಯಲ್ಲಿ ಈತನ ಪಾತ್ರ ಇರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ವಿಚಾರಣೆಯಲ್ಲಿ ಕಂಡುಬಂದಿದ್ದರಿಂದ ಪೊಲೀಸರು ಈತನನ್ನು ಬಂಧಿಸಿದ್ದರು.
Laxmi News 24×7