Breaking News

ಅಕ್ರಮ ಬಡ್ಡಿ ದಂಧೆ- ಚಿತ್ರಹಿಂಸೆ ನೀಡಿ ಯುವಕನನ್ನು ಕೊಂದ ಕಿರಾತಕರು

Spread the love

ಗದಗ : ಆ ಅವಳಿ ನಗರದಲ್ಲಿ ಬಡ್ಡಿ ದಂಧೆ ಅಟ್ಟಹಾಸ ಮೀತಿಮಿರಿದೆ.

ಬಡ್ಡಿ ಹಣಕ್ಕಾಗಿ ಒತ್ತೆಯಾಳಾಗಿ ಇಟ್ಟುಕೊಂಡು, ಚಿತ್ರಹಿಂಸೆ ನೀಡಿ, ಯುವಕನನ್ನು ಕೊಲೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ. ಮಗನ ಮದುವೆ ಮಾಡಬೇಕು ಎಂದು ಕನಸು ಕಂಡಿದ್ದ ತಾಯಿ ಎದುರಲ್ಲೇ ಮುದ್ದಿನ ಮಗ ನರಳಿ ನರಳಿ ಸಾವನ್ನಪ್ಪಿದ್ದಾನೆ. ಗದಗ ನಗರದ ಕೆಸಿರಾಣಿ ರಸ್ತೆಯ ನಿವಾಸಿಯಾದ ಮೃತ್ಯುಂಜಯ ಭರಮಗೌಡರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಸಿಲುಕಿ ಕೊಲೆಯಾದವನು.

ಅಕ್ರಮ ಬಡ್ಡಿ ದಂಧೆ- ಚಿತ್ರಹಿಂಸೆ ನೀಡಿ ಯುವಕನನ್ನು ಕೊಂದ ಕಿರಾತಕರುಸ್ನೇಹಿತನಿಂದ ಸಾಲ : ಮೃತ ಯುವಕ ಮೃತ್ಯುಂಜಯ ಭರಮಗೌಡರ್​ನ ಸ್ನೇಹಿತನಾದ ರೌಡಿಶೀಟರ್ ಉಮೇಶ್‌ ಸುಂಕದನ ಬಳಿ 2 ಲಕ್ಷ ರೂ. ಬಡ್ಡಿ ರೂಪದಲ್ಲಿ ಹಣ ಪಡೆದಿದ್ದ. ಅದಕ್ಕೆ ಒಂದು ಲಕ್ಷ ರೂಪಾಯಿ ಹಣ ವಾಪಸ್‌ ನೀಡಿದ್ದನು. ಆದರೂ ಉಮೇಶ ಸುಂಕದ, 1 ಲಕ್ಷ ರೂಪಾಯಿ ಬಡ್ಡಿಗೆ ಸಮವಾಗಿದೆ. ಇನ್ನೂ 2 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಕಿರುಕುಳ ನೀಡುತ್ತಿದ್ದ.

ಚಿತ್ರಹಿಂಸೆ ಮಾಡಿ ಕೊಂದ ಕಿರಾತಕರು : ಮಾರ್ಚ 23 ಬಡ್ಡಿ ಹಣಕ್ಕಾಗಿ ಮೃತ್ಯುಂಜಯ ಭರಮಗೌಡರ್​ನನ್ನು, ರೌಡಿಶೀಟರ್ ಉಮೇಶ್‌ ಸುಂಕದ, ಸಹೋದರ ಉದಯ ಸುಂಕದ್, ಇನ್ನೋರ್ವ ವಿಕ್ರಮ ಎಂಬುವರು ಸೇರಿಕೊಂಡು ಮನೆಯಿಂದ ಕರೆದ್ಯೊಯ್ದು ಜಮೀನೊಂದರಲ್ಲಿ ಮನಸ್ಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಷ್ಟಕ್ಕೆ ಸಮಾಧಾನವಾಗದೆ ಮೂರು ದಿನ ಒತ್ತೆಯಾಳಾಗಿ ಇಟ್ಟುಕೊಂಡು ಜಮೀನು ಹಾಗೂ ಮನೆಯಲ್ಲಿ ಚಿತ್ರಹಿಂಸೆ ನೀಡಿ ಮನಬಂದಂತೆ ಥಳಿಸಿದ್ದಾರೆ. ಎದೆ, ಹೊಟ್ಟೆ, ಕೈಕಾಲು, ಹೀಗೆ ಎಲ್ಲೆಂದರಲ್ಲಿ ಹಲ್ಲೆ ಮಾಡಿದ್ದರು. ಕಳೆದ ಒಂದು ತಿಂಗಳಿಂದ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಲೆದಿದ್ದಾನೆ.

 


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ