ಹಾವೇರಿ: ಪಿಎಸ್‌ಐ ಅಕ್ರಮ ನೇಮಕಾತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಈ ನಡುವೆ ಪಿಎಸ್‍ಐ ನೇಮಕಾತಿ ಆದೇಶದ ಪತ್ರ ಕೈ ಸೇರುವ ಮುನ್ನವೇ, ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದಲ್ಲಿ ಮವಸ್ತ್ರ ಹಾಕಿಕೊಂಡು ಪೇದೆಯೊಬ್ಬ ಬಿಲ್ಡಪ್ ಕೊಟ್ಟಿರುವ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸದ್ಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸನಗೌಡ ಕರೇಗೌಡ ಪಿಎಸ್‍ಐ ಸೆಲೆಕ್ಷನ್ ಆಗಿದ್ದಕ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‍ಐ ಡ್ರೆಸ್ ಹಾಕ್ಕೊಂಡು ಬಸನಗೌಡ ಭಾಗವಹಿಸಿ ಭಾಷಣ ಮಾಡಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಅಂದ ಹಾಗೇ ಏಪ್ರಿಲ್ 20 ರಂದು ತನಿಖೆಗೆ ಹಾಜರಾಗುವಂತೆ ಸಿಐಡಿ ಸಹಾಯಕ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಐವತ್ತು ಜನರಿಗೆ ನೀಡಿದ್ದ ನೋಟಿಸ್ ಪಟ್ಟಿಯಲ್ಲಿದ್ದ ಬಸನಗೌಡ ಕರೇಗೌಡ ಹೆಸರ ಕೂಡ ಇದ್ದು, ಅಂತಿಮ ಕರೆ ಪತ್ರ ನೀಡುವ ತನಕ ಇದೆಲ್ಲ ಹೇಗೆ ಸಾಧ್ಯು ಅನ್ನೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.