ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸದ್ಯ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ತಕ್ಷಣವೇ ಸ್ಥಳಬಿಟ್ಟು ತೆರಳಬೇಕು. ಬದುಕಬೇಕೆಂದಿದ್ದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಹೇಳುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.
ಇದರಿಂದಾಗಿ 1990ರ ದಶಕದಲ್ಲಿ ಉಂಟಾಗಿದ್ದಂತೆ ಕಾಶ್ಮೀರ ಪಂಡಿತರನ್ನು ಉಗ್ರವಾದಿಗಳ ಗುಂಪು ಗುರಿ ಮಾಡಿಕೊಂಡು ಕೊಂದು ಹಾಕುವ ಪರಿಸ್ಥಿತಿ ಮತ್ತೆ ತಲೆದೋರಿತೇ ಎಂಬ ಪ್ರಶ್ನೆ ಎದುರಾಗಿದೆ.
ಬಾರಾಮುಲ್ಲಾ ಜಿಲ್ಲೆಯಲ್ಲಿಯೇ ಸಕ್ರಿಯವಾಗಿರುವ ಸ್ಥಳೀಯ ಉಗ್ರ ಸಂಘಟನೆ ಲಷ್ಕರ್-ಇ-ಇಸ್ಲಾಂ ವಲಸಿಗರು ಇರುವ ಶಿಬಿರಗಳ ಸಮೀಪವೇ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.