ಬೇಸಿಗೆಯಿಂದಾಗಿ ಮೊಟ್ಟೆ ದರದಲ್ಲಿ ಭಾರಿ ಇಳಿಕೆಯಾಗಿದೆ. ಈ ಹಿಂದೆ 5.30-6.30 ರೂ. ತಲುಪಿದ್ದ ಮೊಟ್ಟೆ ಬೆಲೆ ಈಗ 3.70-4.50 ರೂ. ತಲುಪಿದೆ.
ಹೌದು ಬೆಂಗಳೂರು, ಮೈಸೂರಿನಲ್ಲಿ ಮೊಟ್ಟೆ ಬೆಲೆ 4.30 ರೂ.ನಷ್ಟಿದ್ದರೆ ಹೈದರಾಬಾದ್ ನಲ್ಲಿ 3.70 ರೂ. ನಷ್ಟಿದೆ. ಹೊಸಪೇಟೆಯಲ್ಲಿ 3.90 ರೂ.ನಷ್ಟಿದೆ.
ಇದು ಸಗಟು ಬೆಲೆಯಾಗಿದ್ದು ಚಿಲ್ಲರೆ ಬೆಲೆಯಲ್ಲಿ 20-30 ಪೈಸೆಯಷ್ಟು ಹೆಚ್ಚಳವಾಗಲಿದೆ. ಬೇಸಿಗೆಯಲ್ಲಿ ಮೊಟ್ಟೆ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಲೆ ಕೂಡ ಕುಸಿತಕಂಡಿದೆ.