ರಾಯಚೂರು: ಸಮೀಪದ ಯರಮರಸ್ ನಲ್ಲಿ ಬಾವಿಗೆ ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಡಿ.ಪಾಂಡು ( 27) ಎಂದು ಗುರುತಿಸಲಾಗಿದೆ. ಬಾವಿಯಲ್ಲಿದ್ದ ಜಲಚರಗಳಿಗೆ ಆಹಾರ ನೀಡುವ ಹವ್ಯಾಸ ಹೊಂದಿದ್ದ ಪಾಂಡು ಶನಿವಾರ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಈಜು ಬಾರದ ಕಾರಣ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ರವಿವಾರ ಬೆಳಗ್ಗೆ ಶವ ಮೇಲೆ ಬಂದಿದ್ದು, ಘಟನೆ ಬೆಳಕಿಗೆ ಬಂದಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.