Breaking News

ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು,:ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

Spread the love

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ನಂತಹ ಧಾರ್ಮಿಕ ವಿಚಾರಗಳು ಸಾಲದು ಉತ್ತಮ ಆಡಳಿತ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯೂ ಮುಖ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಹೇಳಿದೆ.

ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿಗೆ ತೆರಳಿದ್ದರು. ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ನಡ್ಡಾ ಅವರು ರಾಜ್ಯದ ಹಲವು ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಆಡಳಿತದ ಮೇಲೆ ಗಮನ ಹರಿಸಬೇಕು. ರೈತರ ಮನ ಗೆಲ್ಲಲ್ಲು ನೀರಾವರಿ ಯೋಜನೆಗಳನ್ನು ಹೆಚ್ಚು ಕೇಂದ್ರಿಕರಿಸಬೇಕು. ಜನಪ್ರಿಯ ಆಡಳಿತ ನೀಡಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಹಲಾಲ್ – ಹಿಜಬ್ ಎಂದು ಸಮುದಾಯದವೊಂದನ್ನು ಟಾರ್ಗೆಟ್ ಮಾಡಿ ಚುನಾವಣೆ ಗೆಲ್ಲಲು ಕನಸು ಉತ್ತಮವಲ್ಲ ಎಂದು ನಡ್ಡಾ ಅವರು, ಬೊಮ್ಮಾಯಿ ಅವರಿಗೆ ಹೇಳಿದ್ದಾರೆ.

ಹಿಜಬ್, ಹಲಾಲ್ ಒಂದು ಸಮುದಾಯದ ಮತಗಳನ್ನು ಕ್ರೋಢೀಕರಿಸಬಹುದು. ಆದರೆ ಇದು ಗೆಲುವಿಗೆ ಸಾಲದು, ಮತ್ತೆ ಅಧಿಕಾರಕ್ಕೆ ಬರಲು ಉತ್ತಮ ಆಡಳಿತವೂ ಬಹಳ ಮುಖ್ಯ ಎಂದು ಹೇಳಿದ್ದಾರೆ. ಇದೇ ವೇಳೆ ಬೊಮ್ಮಾಯಿ ಅವರು ರಾಜ್ಯದ ಹಲವು ನಾಯಕರ ವಿರುದ್ಧ ದೂರು ಕೂಡಾ ನೀಡಿದ್ದಾರೆ. ಕೆಲವು ನಾಯಕರ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಬೇಸರ ಹೊರಹಾಕಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ