ಚಿಕ್ಕೋಡಿ(ಬೆಳಗಾವಿ): ಹಲಾಲ್ ನಿಷೇಧ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಿಪ್ಪಾಣಿಯ ಸಮಾಧಿ ಮಠದಲ್ಲಿ ಇಂದು ಧಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಹಲಾಲ್ ಕಟ್ ನಿಷೇಧ ಮಾಡಬೇಕು ಎಂದು ಈಗಾಗಲೇ ಕೆಲ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಹಲಾಲ್ ನಿಷೇಧ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಹಲಾಲ್ ಕಟ್ ಮಾಡಿ ಮುಸ್ಲಿಂ ದೇವರಿಗೆ ಅರ್ಪಣೆ ಮಾಡುತ್ತಾರೆ ಎಂದು ನಮಗೆ ತಿಳಿದಿದೆ ಎಂದರು.
ಹಿಂದೂಪರ ಸಂಘಟನೆಗಳು ಮಾಡ್ತಿರೋದು ಸರಿ ಇದೆ ಎಂದ ಸಚಿವೆ, ಹಿಂದೂಪರ ಸಂಘಟನೆಗಳು ಮಾಡ್ತಿರೋ ಹಲಾಲ್ ಕಟ್ ನಿಷೇಧವನ್ನ ಸಮರ್ಥಿಸಿಕೊಂಡರು. ಈ ಸಂಘಟನೆಗಳು ಹೇಳ್ತಿರುವ ಜಟ್ಕಾ ಕಟ್ ಜಾರಿಗೆ ತರಬೇಕು ಎಂದು ಪರೋಕ್ಷವಾಗಿ ಹೇಳಿದರು.