Breaking News

ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರಿಗೆ ಗ್ರಾಮಸ್ಥರಿಂದ ಧರ್ಮದೇಟು

Spread the love

ಹಾವೇರಿ: ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರಿಗೆ ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಬಳಿಯ ಜೇಕಿನಕಟ್ಟಿ ರಸ್ತೆಯಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆ ಮೂಲದ ಇಬ್ಬರು ವ್ಯಕ್ತಿಗಳು ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಬಳಿಕ ಗ್ರಾಮದ ಹೊರವಲಯಕ್ಕೆ ಬಂದು ಕಾವಿ ಕಳಚಿ ಬೇರೆ ಬಟ್ಟೆ ತೊಟ್ಟು ಓಡಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಈ ವಿಚಾರವನ್ನು ಗಮನಿಸಿದ ಗ್ರಾಮಸ್ಥರು ಇಬ್ಬರನ್ನು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಾವಿ ತೊಟ್ಟು, ಮನೆಮನೆಗೆ ತೆರಳಿ, ಜನರಿಗೆ ಇಲ್ಲಸಲ್ಲದ್ದು ಹೇಳಿ, ಹಣ ವಸೂಲಿ ಮಾಡುತ್ತಿದ್ದರು. ಕಾವಿ ತೊಟ್ಟು ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ