2021-22ರಲ್ಲಿ 5 ಸಾವಿರ ಕೋಟಿ ಕಡಿಮೆ ಇತ್ತು. 2022-23ರ ಬಜೆಟ್‍ನ ಒಟ್ಟು ಗಾತ್ರ 2 ಲಕ್ಷ 65 ಸಾವಿರದ 720 ಕೋಟಿ. ಇದು ಹಿಂದಿನ ಬಜೆಟ್‍ಗಿಂತ ಶೇ.7.9ರಷ್ಟು ಹೆಚ್ಚಾಗಿದೆ ಎಂದು ವಿಧಾನಸಭೆ ಸದನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್ ಗಾತ್ರ ಕಡಿಮೆ ಮಾಡಬೇಕಾಗುತ್ತದೆ ಎಂದು ನಮ್ಮ ಅಧಿಕಾರಿಗಳು ಹೇಳಿದ್ದರು. ಆದರೆ ಬಜೆಟ್ ಗಾತ್ರ ಕಡಿಮೆ ಮಾಡಿದ್ರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ನಾವು ಏನಾದ್ರೂ ಮಾಡಿ ಮೊಬಲೈಜೇಶನ್ ಹೆಚ್ಚಿಗೆ ಮಾಡಬೇಕು ಮತ್ತು ಕೇಂದ್ರ ಸರ್ಕಾರದಿಂದ ಬಾಕಿ ಇರುವ ನಮ್ಮ ಪಾಲನ್ನು ತರುವುದು ಸೇರಿ ಎಲ್ಲವನ್ನೂ ಸೇರಿಸಿ ಬಜೆಟ್‍ನ್ನು ಹೆಚ್ಚಿಗೆ ಮಾಡಬೇಕು ಎಂದು ತೀರ್ಮಾನ ಮಾಡಿದ ಹಿನ್ನೆಲೆ ಶೇ.7.9ರಷ್ಟು ಬಜೆಟ್‍ನ್ನು ಹೆಚ್ಚಿಗೆ ಮಾಡಿದ್ದೇವೆ.
