Breaking News

ಪುರಸಭೆ ಸದಸ್ಯನ ಮೇಲೆ 6 ಜನರಿದ್ದ ಗುಂಪಿಂದ ಮಾರಣಾಂತಿಕ ಹಲ್ಲೆ

Spread the love

ವಿಜಯಪುರ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆ ಸದಸ್ಯನ ಮೇಲೆ 6 ಜನರಿದ್ದ ಗುಂಪು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಕಟ್ಟಿಗೆ, ಬಡಿಗೆಗಳಿಂದ ಮನಸೋಇಚ್ಚೆ ಹಲ್ಲೆ ಮಾಡಲಾಗಿದೆ. ಇಂಡಿ ವಾರ್ಡ್ ನಂಬರ್​ 15ರ ಸದಸ್ಯ ಶಬೀರ್ ಖಾಜಿ ಹಲ್ಲೆಗೊಳಗಾಗಿದ್ದಾರೆ.

ಎಂ.ಬಿ.ಮಾಣಿಕ್​ ಹಾಗೂ ಆತನ ಸಹಚರರು ಹಲ್ಲೆಗೈದ ಆರೋಪಿಗಳಾಗಿದ್ದಾರೆ. ಮನೆಯ ಪಕ್ಕದ ಜಾಗಕ್ಕಾಗಿ ಪುರಸಭೆ ಸದಸ್ಯ ಮತ್ತು ಮಾಣಿಕ್​ ಮಧ್ಯೆ ನಡೆದ ಜಗಳದ ವೇಳೆ ಮಾಣಿಕ್​ ಮತ್ತು ಆತನ ಸಹಚರರು ಮಾರಣಾಂತಿಕ ಹಲ್ಲೆ ಮಾಡಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ