Breaking News

ಆಚಾರ್ಯ ತಾಂತ್ರಿಕ ಕಾಲೇಜಿನ ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಸ್ತವವಾಗಿ ಹಾರುವ ಅನುಭವ ನೀಡುವಂತಹ ವಿಮಾನವನ್ನು ನಿರ್ಮಿಸಿದ್ದಾರೆ

Spread the love

ಬೆಂಗಳೂರು: ವಿಮಾನದಲ್ಲಿ ಪೈಲೆಟ್​ಗಳು ಕಾರ್ಯ ನಿರ್ವಹಿಸುವ ರೀತಿಯಲ್ಲಿ ನೀವೂ ಸಹ ಪೈಲಟ್ ಸೀಟಲ್ಲಿ ಕುಳಿತು ಕೆಲ ಹೊತ್ತು ಪೈಲಟ್ ಅಗಬಹುದಾಗಿದೆ. ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಂತೂ ಇದೊಂದು ನೈಜ ಅನುಭವ. ರಾಜಧಾನಿಯ ಚಿಕ್ಕಬಾಣಾವರ ಸಮೀಪದ ಆಚಾರ್ಯ ಶಿಕ್ಷಣ ಸಂಸ್ಥೆ ಆವರಣಕ್ಕೆ ಭೇಟಿ ನೀಡಿದರೆ ಈ ಎಲ್ಲ ವಿಶೇಷತೆ ಕಂಡುಬರುತ್ತದೆ.

ಆಚಾರ್ಯ ತಾಂತ್ರಿಕ ಕಾಲೇಜಿನ ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಸ್ತವವಾಗಿ ಹಾರುವ ಅನುಭವ ನೀಡುವಂತಹ ವಿಮಾನವನ್ನು ನಿರ್ಮಿಸಿದ್ದಾರೆ. ವಿಮಾನದ ಮುಖ್ಯ ವಿಭಾಗವಾದ ಪೈಲೆಟ್ ಕ್ಯಾಬಿನ್ ಭಾಗವನ್ನು ನಿರ್ಮಿಸಿ ಅದರಲ್ಲಿ ವಿಮಾನ ಹಾರಾಟದ ವೇಳೆ ಬಳಸುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ, ಪೈಲಟ್​ಗಳಂತೆ ವಿಮಾನ ಚಲಾಯಿಸುವ ಅನುಭವ ಪಡೆಯುವಂತಹ ಅವಕಾಶ ಕಲ್ಪಿಸಲಾಗಿದೆ.

ಇಂಜಿನಿಯರಿಂಗ್ ಉನ್ನತ ಶಿಕ್ಷಣಕ್ಕಾಗಿ ಎನ್.ಇ.ಪಿ ಅನುಗುಣವಾಗಿ ವಿಮಾನ ಅನುಕರಣಾ ಪ್ರಯೋಗಾಲಯದ ಸಾಮರ್ಥ್ಯವನ್ನು ವಿನ್ಯಾಸಗೊಳಿಸಲಾಗಿದೆ. ಅನುಕರಣಾ ವಿಮಾನವನ್ನು ಖ್ಯಾತ ಏರ್ಲೈನ್ಸ್ ಸಂಸ್ಥೆಗಳಲ್ಲೊಂದಾದ ಇಂಡಿಗೋ ಏರ್ಲೈನ್ಸ್​ನ ಹಿರಿಯ ಪೈಲೆಟ್ ಕ್ಯಾಪ್ಟನ್ ವಸುಂಧರಾ ರಾಜಣ್ಣ ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ