Breaking News

ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್‌ ಬಂಧನ ಯಾವಾಗ? : ಕಾಂಗ್ರೆಸ್ ಟ್ವೀಟ್

Spread the love

ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್‌ ಬಂಧನ ಯಾವಾಗ ಎಂದು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಟ್ವೀಟ್‍ನಲ್ಲಿ ಏನಿದೆ:
ಮಾನ್ಯ ಬೊಮ್ಮಾಯಿ ಅವರೇ, ದೇಶ ವಿರೋಧಿಗಳನ್ನು ಸಹಿಸುವುದಿಲ್ಲ ಎಂದು ಹೇಳಿಕೆ ಕೊಟ್ಟು ವೀರಾವೇಶ ಮೆರೆದಿದ್ದೀರಿ, ಸಂತೋಷ. ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಯಾವಾಗ ಬಂಧಿಸುತ್ತೀರಿ? ಆತನನ್ನು ಜೈಲಿಗಟ್ಟಿ ನಿಮ್ಮ ಹೇಳಿಕೆಗೆ ಬದ್ಧತೆ ತೋರಿಸಿ. ಹಾಗೆಯೇ ಈಶ್ವರಪ್ಪರ ರಾಜೀನಾಮೆ ಯಾವಾಗ ಪಡೆಯುವಿರಿ?.

ಬಿಜೆಪಿ ಸರ್ಕಾರದ ಸಾಧನೆಗಳು, ಸಿನೆಮಾ ಪ್ರಚಾರ ಮಾಡುವುದು, ಸಿನೆಮಾ ನೋಡುವುದು, ಸಿನೆಮಾ ಮಾಡುವುದು!. ಕೃಷಿ ಇಲಾಖೆಯಲ್ಲಿ ಜ್ವಲಂತ ಸಮಸ್ಯೆಗಳಿವೆ, ರೈತರ ಸಂಕಷ್ಟ ಹಲವಾರಿವೆ, ರಸಗೊಬ್ಬರ ಅಭಾವವಿದೆ. ಆದರೆ ಕೃಷಿ ಸಚಿವರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ!. ಬಿ.ಸಿ ಪಾಟೀಲ್ ಅವರೇ, ರೈತರಿಗೂ ನಿಮ್ಮ ಕಾಲ್‍ಶೀಟ್ ಬೇಕಿತ್ತು, ಯಾವಾಗ ಕೊಡುವಿರಿ?.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ