ಬೆಂಗಳೂರು: ವಿಧಾನಸಭೆಯಲ್ಲಿ (Assembly) ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಇವತ್ತು ಹಲವು ಸಚಿವರು ಗೈರಾಗಿದ್ದಕ್ಕೆ ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಕೆಂಡಾಮಂಡಲರಾದ್ರು. ಬಿಜೆಪಿಯಲ್ಲಿ ಯಡಿಯೂರಪ್ಪ (Yediyurappa) ಬಿಟ್ರೆ ಇನ್ಯಾರಿಗೂ ಜವಾಬ್ದಾರಿ (Responsibility) ಅನ್ನೋದೇ ಇಲ್ಲ ಅಂತ ಕಿಡಿ ಕಾರಿದ್ದಾರೆ.
ಸದನದಲ್ಲಿ ಚರ್ಚೆ ಮಾಡುವಾಗ ಸಚಿವರು (Ministers) ಹಾಜರಾಗಿರಬೇಕು. ಸಚಿವರೇ ಇಲ್ಲದಿದ್ರೆ ಹೇಗೆ? ಆ ಇಲಾಖೆ ಸಚಿವರಿಲ್ಲದಾಗ ಬೇರೆ ಸಚಿವರು ಚರ್ಚೆ ವಿಷಯವನ್ನು ಬರೆದುಕೊಳ್ಳಬೇಕು ಇಲ್ಲವಾದ್ರೆ ನಮ್ಮ ಪ್ರಶ್ನೆಗಳಿಗೆ ಅವ್ರು ಉತ್ತರಿಸೋದಾದ್ರು ಹೇಗೆ ಅಂತ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ಈ ವೇಳೆ ಯಡಿಯೂರಪ್ಪರನ್ನು ಹೊಗಳಿದ ಸಿದ್ದರಾಮಯ್ಯ, ಯಡಿಯೂರಪ್ಪ ಮಾತ್ರ ಕಲಾಪದಲ್ಲಿ ಇರ್ತಾರೆ, ಯಡಿಯೂರಪ್ಪಗೆ ಇರೋ ಜವಾಬ್ದಾರಿ ಬೇರೆಯವ್ರಿಗೆ ಇಲ್ಲ ಎಂದು ಸಚಿವರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.