ನಟ ಪ್ರಭಾಸ್ ಅಭಿನಯದ ‘ರಾಧೆಶ್ಯಾಮ್’ ಸಿನಿಮಾ ಬಳಿಕ ಈಗ ಪ್ರಭಾಸ್ ನಾಪತ್ತೆ ಆಗಿದ್ದಾರೆ. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಕಂಡು ನಟ ಪ್ರಭಾಸ್ ಬೇಸರವಾಗಿದ್ದಾರೆ. ಹಾಗಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿತ್ತು. ಆದರೆ ಕಾರಣ ಬೇರೆನೇ ಇದೆ.
ನಟ ಪ್ರಭಾಸ್ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಭಾಸ್ ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹಾರಿದ್ದಾರೆ. ಚಿಕಿತ್ಸೆಗಾಗಿ ಪ್ರಭಾಸ್ ಸ್ಪೇನ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೆಲವು ದಿನಗಳ ಹಿಂದೆ ಪ್ರಭಾಸ್ ‘ಸಲಾರ್’ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಆಗ ಬಾರ್ಸಿಲೋನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈಗ ಅದೇ ಸಮಸ್ಯೆಯಿಂದ ಪ್ರಭಾಸ್ ಶಸ್ತ್ರ ಚಿಕಿತ್ಸೆ ಪಡೆಯಬೇಕಾಗಿದೆ. ಹಾಗಾಗಿ ಸ್ಪೇನ್‌ಗೆ ಹಾರಿದ್ದಾರೆ. ಇದು ಅಷ್ಟೇನು ಗಂಭೀರವಾದ ಶಸ್ತ್ರಚಿಕಿತ್ಸೆ ಅಲ್ಲ. ಬದಲಿಗೆ ಚಿಕ್ಕದಾದ ಸರ್ಜರಿ ಅಂತೆ. ಆದರೂ ಕೂಡ ವೇಗವಾಗಿ ಗುಣಮುಖರಾಗಲು ಹೆಚ್ಚು ಕಾಲ ವಿಶ್ರಾಂತಿಯ ಅಗತ್ಯ ಇದೆಯಂತೆ. ಇನ್ನು ಸ್ಪೇನ್‌ಗೆ ಭೇಟಿ ನೀಡಿರುವ ಪ್ರಭಾಸ್‌ರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿರುವುದಾಗಿ ವರದಿ ಆಗಿದೆ.