ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬಳೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಕತಿಯ ಸುಪ್ರಸಿದ್ಧ ಹೋಟಲ್ ಮೇರಿಯಟ್‍ನಲ್ಲಿ ಹರಿಯಾಣಾ ರಾಜ್ಯದ ಗುಡಗಾಂವ್‍ನ ಶಿಪ್ರಾ ಬಿಜಾವತ್ ಎಂಬವರು ಹೊಟೆಲ್ ಮೆರಿಯಟ್‍ನಲ್ಲಿ ರೂಮ್ ಮಾಡಿಕೊಂಡಿದ್ದರು. ಬೆಳಗಾವಿ ಹತ್ತಿರದ ರಾಜಾಗೋಳಿ ಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಎಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಇವರು ವಜ್ರದ ಬಳೆಗಳನ್ನು ಬ್ಯಾಗ್‍ನಲ್ಲಿ ಹಾಕಿ ತೆಗೆದಿಟ್ಟಿದ್ದರು. ಬೆಳಿಗ್ಗೆ 10 ಗಂಟೆಗೆ ಇವರು ಕಾರ್ಖಾನೆಗೆ ಹೋಗಿ ರಾತ್ರಿ ಸುಮಾರು 10ಗಂಟೆ 30 ನಿಮಿಷಕ್ಕೆ ವಾಪಸ್ ಹೋಟಲ್ ರೋಮ್‍ಗೆ ವಾಪಸ್ಸಾಗಿದ್ದರು. ಈ ವೇಳೆ ಬ್ಯಾಗ್‍ನ್ನು ಪರಿಶೀಲನೆ ಮಾಡಿದಾಗ ವಜ್ರದ ಬಳೆಗಳು ಕಳುವಾದ ಕುರಿತು ತಿಳಿಸು ಬಂದಿತು.
ಈ ಕುರಿತಂತೆ ಮಹಿಳೆ ಹೋಟಲ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೂಡಲೇ ಹೋಟಲ್ ಸಿಬ್ಬಂದಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಓರ್ವ ಮಹಿಳೆ ಬಳೆಗಳನ್ನು ಕದ್ದು ಪರಾರಿಯಾದ ವಿಷಯ ತಿಳಿದು ಬಂದಿದೆ. ಇನ್ನು ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.