Breaking News

KSRTC: ಕರ್ನಾಟಕದಲ್ಲಿ ಸಾರಿಗೆ ನೌಕರರು ಲೈನ್‌ಮನ್‌ಗಳಿಗಿಂತ ಕಡೆ !

Spread the love

ಬೆಂಗಳೂರು, ಮಾ. 17: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಕೆಪಿಟಿಸಿಎಲ್ ಲೈನ್‌ಮನ್‌ಗಳಿಗಿಂತಲೂ ಕಡೆ. ಸಾರಿಗೆ ಇಲಾಖೆಯಲ್ಲಿ ಇಪ್ಪತ್ತೆಂಟು ವರ್ಷ ಸೇವೆ ಸಲ್ಲಿಸಿದ ನೌಕರರು 35 ಸಾವಿರ ವೇತನ ಪಡೆಯೋದು ಕಷ್ಟ. ಅದೇ ಕೆಪಿಟಿಸಿಎಲ್ ನಲ್ಲಿ ಲೈನ್‌ಮನ್‌ಗಳು ಗರಿಷ್ಠ 80 ಸಾವಿರ ವರೆಗೂ ಸಂಬಳ ತಗೋತಾರೆ.

ಆರು ವರ್ಷವಾದ್ರೂ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿಲ್ಲ. ನಮ್ಮ ವೇತನ ನ್ಯಾಯಸಮ್ಮತವಾಗಿ ಪರಿಷ್ಕರಣೆ ಮಾಡದಿದ್ದರೆ ಮುಂದಿನ ಎಲ್ಲಾ ಚುನಾವಣೆ ಬಹಿಷ್ಕರಿಸಿ ವೋಟು ಬದ್ಲು ನೋಟಾ ಚಲಾವಣೆ ಮಾಡ್ತೀವಿ!

ಸಾರಿಗೆ ಇಲಾಖೆ ಮತ್ತು ಸರ್ಕಾರದ ನಡೆ ಬಗ್ಗೆ ಸಾರಿಗೆ ನೌಕರರು ಮತ್ತೆ ರೋಸಿ ಹೋಗಿದ್ದಾರೆ. ವೇತನ ಪರಿಷ್ಕರಣೆ ಮಾಡದೇ ಸರ್ಕಾರ ಅನುಸರಿಸುತ್ತಿರುವ ನೀತಿಯಿಂದ ಸಾರಿಗೆ ನೌಕರರು ಹೊಸ ಹೋರಾಟದ ಹಾದಿ ಹಿಡಿಯುವ ಬಗ್ಗೆ ಮಾತನಾಡುತ್ತಿದ್ದಾರೆ. ಜನರ ಸೇವೆಗೆ ತೊಂದರೆಯಾಗದಂತೆ ಈ ಭಾರಿ ಮುಂದೆ ಎದುರಾಗುವ ಎಲ್ಲಾ ಚುನಾವಣೆ ಬಹಿಷ್ಕರಿಸುವುದು, ಇಲ್ಲವೇ ನೋಟಾ ಚಲಾವಣೆ ಮಾಡುವ ನಗ್ಗೆ ನೌಕರರ ವಲಯದಲ್ಲಿ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಸಾರಿಗೆ ನೌಕರರ ಹೋರಾಟದ ಬಿಸಿ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ವೇತನ ಪರಿಷ್ಕರಣೆ ಬಗ್ಗೆ ಉಡಾಫೆ ಉತ್ತರ :

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರಿಗೆ ನೌಕರರು ಕನಿಷ್ಠ ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸ ಮಾಡಿಸಲಾಗದೇ ಆನ್‌ಲೈನ್ ಆಪ್‌ಗಳಲ್ಲಿ ಸಾಲ ಮಾಡಿ ಬಡ್ಡಿ ಕಟ್ಟಲಾಗದೇ ಬಾಯಿ ಬಡೆದುಕೊಳ್ಳುತ್ತಿದ್ದಾರೆ. 2021 ರ ಮುಷ್ಕರದ ಬಳಿಕ ನ್ಯಾಯ ಸಮ್ಮತ ವೇತ ಪರಿಷ್ಕರಣೆಯಾಗುತ್ತದೆ ಎಂದು ಕಾದು ಕುಳಿತಿದ್ದ ಸಾರಿಗೆ ನೌಕರರಿಗೆ ಸಾರಿಗೆ ಇಲಾಖೆ ಉಡಾಫೆ ಉತ್ತರ ನೀಡಿದೆ.

ಕೋರ್ಟ್‌ಗೆ ಬೆಲೆ ಕೊಟ್ಟ ನೌಕರರ ಕಥೆ ಕೇಳಿ:

ನಿಯಮ ಬದ್ಧವಾಗಿ 2020 ರಲ್ಲಿಯೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ನಾನಾ ಕಾರಣಗಳನ್ನು ನೀಡಿ ಪರಿಷ್ಕರಣೆ ಮಾಡದ ಕಾರಣ 2021 ಮಾರ್ಚ್ ನಲ್ಲಿ ಹದಿನೈದು ದಿನ ಮುಷ್ಕರ ನಡೆಸಿ ರಾಷ್ಟ್ರದ ಗಮನ ಸೆಳೆದಿದ್ದರು. ನ್ಯಾಯಾಲಯ ಮಧ್ಯ ಪ್ರವೇಶಿಸಿ ಮೊದಲು ಸೇವೆ ಆರಂಭಿಸಿ ಎಂದು ಹೈಕೋರ್ಟ್ ಹೇಳಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಿದ್ದರು. ಮುಷ್ಕರ ನಡೆದು ಮತ್ತೆ ಒಂದು ವರ್ಷ ಕಳೆದಿದೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಏನಾದರೂ ಬೆಳವಣಿಗೆ ಆಗಿದೆಯಾ ಎಂತ ನೋಡಿದ್ರೆ ಏನೂ ಅಗಿಲ್ಲ!


Spread the love

About Laxminews 24x7

Check Also

7ನೇ ದಿನಕ್ಕೆ ಕಾಲಿಟ್ಟ ಕಬ್ಬು ಹೋರಾಟಗಾರರ ಪ್ರತಿಭಟನೆ

Spread the loveಚಿಕ್ಕೋಡಿ (ಬೆಳಗಾವಿ): ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ