ಬೆಂಗಳೂರು: ಮೂರು ಬಾರಿ ಎಂಎಲ್ ಸಿಯಾಗಿ ಆಯ್ಕೆಯಾಗಿದ್ದ ಗೋ.ಮಧುಸೂದನ್ ಅವರಿಗೆ ಈ ಬಾರಿ ಟಿಕೆಟ್ ನೀಡದಿರುವುದು ಅವರ ಬೆಂಬಲಿಗರಿಗೆ ಆಘಾತ ಉಂಟು ಮಾಡಿದೆ.
ವಿಧಾನ ಪರಿಷತ್ ಚುನಾವಣೆಗಾಗಿ ನಾಲ್ಕು ಸೆಟ್ ವೋಟರ್ ಲಿಸ್ಟ್ ನೊಂದಿಗೆ ಹೊಸ ಸದಸ್ಯರನ್ನು ಸೇರಿಸಲು 50 ಸಾವಿರ ಅರ್ಜಿ ಫಾರಂ ನೊಂದಿಗೆ ಸಿದ್ಧರಾಗಿದ್ದ ಮಧುಸೂದನ್ ಅವರಿಗೆ ಟಿಕೆಟ್ ನಿರಾಕರಿಸಿರುವುದು ನುಂಗಲಾರದ ತುತ್ತಾಗಿದೆ.
ಮಧುಸೂಧನ್ ಅವರು ಸ್ಪರ್ಧೆಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನಗುಮೊಗದಿಂದಲೇ ಬಿಜೆಪಿ ಪದಾಧಿಕಾರಿಗಳಿಗೆ ಚುನಾವಣಾ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಕಳೆದ 18 ವರ್ಷಗಳಿಂದ ದಕ್ಷಿಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಧುಸೂದನ್ ಏಳು ತಿಂಗಳಿನಿಂದ ಮುಂದಿನ ಚುನಾವಣೆಗೆ ತಯಾರಿ ನಡೆಸಿದ್ದರು. ಕೊನೆ ಗಳಿಗೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರಿಗಾದಂತೆ ಮಧು ಸೂದನ್ ಅವರನ್ನು ಬಿಜೆಪಿ ಪರಿಗಣಿಸದೆ ಟಿಕೆಟ್ ನೀಡಿಲ್ಲ ಎಂದು ಅವರ ಬೆಂಬಲಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕೆಲ್ಲಾ ಬಿಎಲ್ ಸಂತೋಷ್ ಅವರೇ ಕಾರಣ ಎಂಬುದು ಬೆಂಬಲಿಗರ ಆರೋಪ.