ಮೈಸೂರು: ಹೆಚ್ಚು ಸಾಲ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವ್ಯಂಗ್ಯವಾಡಿದರು.
ಕೆ ಆರ್ ನಗರದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವರು ರಾಜ್ಯದ ಸಿಎಂ ಆಗಿದ್ದರು. ನಮ್ಮ ಪಕ್ಷದಿಂದಲೇ ಹೊರ ಹೋದ ಹಿರಿಯ ನಾಯಕರೊಬ್ಬರು ನಮಗೆ ಬೆಂಬಲ ನೀಡಲಿಲ್ಲ. ನಮ್ಮ ಮನೆಯಲ್ಲಿಯೇ ತಿಂದು ಮೈ ಬೆಳೆಸಿ ಈಗ ನಮಗೇನೇ ತಿರುಗಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ಗೆದ್ದರು ಪರವಾಗಿಲ್ಲ ಜೆಡಿಎಸ್ ಗೆಲ್ಲಬಾರದು ಅಂದಿದ್ದರು. ಆದರೆ ನಮ್ಮ ರಾಜ್ಯದ ಜನ ತುಂಬಾ ಹುಷಾರ್ ಇದ್ದಾರೆ. ಯಾರನ್ನು ಗೆಲ್ಲಿಸಬೇಕು. ಯಾರನ್ನು ಬೀಡಬೇಕು ಅನ್ನುವುದು ಜನತೆಗೆ ತುಂಬಾ ಚೆನ್ನಾಗಿ ಗೋತ್ತಿದೆ ಎಂದರು.
ಯಾರು ಮಾಡದಷ್ಟು ಸಾಲ ಸಿದ್ದರಾಮಯ್ಯ ಮಾಡಿದ್ದಾರೆ. ಅವರು 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯದ ಬಜೆಟ್‍ನಷ್ಟೇ ಅವರು ಸಾಲ ಮಾಡಿದ್ದಾರೆ. ಆದರೂ ಜೆಡಿಎಸ್ ಬಗ್ಗೆ ಅವರು ಮಾತನಾಡುತ್ತಾರೆ. ಇನ್ನು ಮುಂದೆಯಾದರೂ ಅವರು ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.
Laxmi News 24×7