ಭಾರೀ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆ ರಿಸಲ್ಟ್ ಹೊರಬಿದ್ದಿದೆ. ಎಲೆಕ್ಷನ್ನಲ್ಲಿ ಕಮಲ ಕಮಾಲ್ ಮಾಡಿದ್ರೆ ಕಾಂಗ್ರೆಸ್ನ ಥಂಡಾ ಹೊಡೆದಿದೆ. ಈ ನಡುವೆ ಕೇಸರಿ ಕಲಿಗಳು ಸಿಂಹಾನಸವೇರಲು ಸಿದ್ಧತೆ ಮಾಡಿಕೊಂಡಿದ್ದರೆ ಕೈ ನಾಯಕರು ಆತ್ಮವಿಮರ್ಶೆಗೆ ಮುಂದಾಗಿದ್ದಾರೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಮಲ ಪಾಳಯ ಅಕ್ಷಶರಃ ಕಮಾಲ್ ಮಾಡಿದೆ. ಪಂಜಾಬ್ನಲ್ಲಿ ಆಪ್ ಕೈಯನ್ನು ಗುಡಿಸಿ ಗುಂಡಾಂತರ ಮಾಡಿದ್ದು ಕಾಂಗ್ರೆಸ್ ಧೂಳಿಪಟವಾಗಿದೆ. ಇದು ಹಸ್ತ ಪಡೆಗೆ ಇನ್ನಿಲ್ಲದ ಮುಜುಗರವನ್ನುಂಟು ಮಾಡಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಬೆನ್ನಲ್ಲೇ ಸ್ವಪಕ್ಷದವರೇ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದು ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ಜಿ-23 ಗುಟುರು
ಕಾಂಗ್ರೆಸ್ ಹೀನಾಯ ಸೋಲು ಪಕ್ಷದೊಳಗಿನ ಜಿ-23 ತಂಡ ಆಯಕ್ಟೀವ್ ಆಗಿದೆ. ಪಂಜಾಬ್ನ ಬೆಳವಣಿಗೆ ಬಗ್ಗೆ ಅಸಮಾಧಾನ ಹೊರಹಾಕಿದೆ. ದೆಹಲಿಯ ಗುಲಾಂ ನಬಿ ಆಜಾದ್ ನಿವಾಸದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಕಪಿಲ್ ಸಿಬಲ್, ಮನೀಶ್ ತಿವಾರಿ ಸೇರಿ ಹಲವು ಭಾಗಿ ಆಗಿದ್ರು.
ಅಮೂಲಾಗ್ರ ಬದಲಾವಣೆಗೆ ಪಟ್ಟು!
- ಪಂಜಾಬ್ ಸೋಲಿನಲ್ಲಿ ಆದ ತಪ್ಪುಗಳನ್ನು ಗುರುತಿಸಬೇಕು
- ತಕ್ಷಣವೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಬೇಕು
- ಎಐಸಿಸಿಗೆ ಶೀಘ್ರವೇ ಪೂರ್ಣಾವಧಿ ಅಧ್ಯಕ್ಷರನ್ನ ನೇಮಿಸಬೇಕು
- ಹೊಸ ನಾಯಕತ್ವಕ್ಕೆ ಅವಕಾಶ ನೀಡುವ ಸಮಯ ಇದಾಗಿದೆ
- ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಸಮನ್ವಯತೆ ಕಾಪಾಡುವುದು
- ಪಕ್ಷದ ಕಾರ್ಯಗಳಿಗೆ 24×7 ಸಮಯವನ್ನ ಮೀಸಲಿಡಬೇಕು
- ಸೋಲಿನ ಆತ್ಮವಿಮರ್ಶೆಗೆ ಶೀಘ್ರವೇ ಸೋನಿಯಾ ಮೀಟಿಂಗ್
ಪಂಚರಾಜ್ಯ ಚುನಾವಣೆಯ ಅನಿರೀಕ್ಷಿತ ಸೋಲಿನ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದಿನ ವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆಯಲಿದ್ದಾರೆ. ಪಕ್ಷ ಎಲ್ಲಿ ಎಡವಿದೆ ಅನ್ನೋ ಬಗ್ಗೆ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ.