Breaking News

ಚೆಲುವಿನ ಚಿತ್ತಾರ’ ತರದ್ದೇ ಸುದ್ದಿ.. ಪ್ರೀತಿಸಿ ಮದ್ವೆಯಾಗಿದ್ದ ಮಗಳಿಗೆ ಸರ್ಪ್ರೈಸ್‌ ಅಂತಾ ಕರೆಸಿ ಮಾಡಿದ್ದೇನು ಗೊತ್ತಾ?

Spread the love

ಕಲಬುರಗಿ: ನೀವು ಚೆಲುವಿನ ಚಿತ್ತಾರ ಸಿನಿಮಾ ನೋಡಿದ್ದೀರಲ್ವಾ? ಈ ಸಿನಿಮಾ ನೋಡದೇ ಇರೋರು ಯಾರು ಇದಾರೆ ಹೇಳಿ? ಇಬ್ಬರು ಪ್ರೇಮಿಗಳು ಮನೆ ಬಿಟ್ಟು ಬರ್ತಾರೆ, ಸಂಧಾನಕ್ಕೆ ಅಂತಾ ಕರೆಸಿಕೊಂಡ ಮನೆಯವ್ರು ಇಬ್ಬರನ್ನು ದೂರ ದೂರ ಮಾಡ್ತಾರೆ. ಇಲ್ಲೂ ಸೇಮ್‌ ಟು ಸೇಮ್‌ ಅಂತದ್ದೇ ದುರಂತ ನಡೆದಿದೆ.

ಇನ್ನೂ ಮುಂದುವರೆದು ಮಗಳು ಮನೆಯವ್ರಿಗೆ ಸರ್ಪ್ರೈಸ್‌ ಕೋಡೋಣ ಅನ್ನುವಷ್ಟರಲ್ಲಿ, ಮನೆಯವ್ರೇ ಮಗಳಿಗೆ ಸಾವಿನ ಸರ್ಪ್ರೈಸ್‌ ಕೊಟ್ಟಿದ್ದಾರೆ.

ಚಿಗುರಿದ ಪ್ರೀತಿ.. ಕಮರಿದ ಕನಸು

ಈಕೆ ಹೆಸರು ಸುಶ್ಮೀತಾ. ಇವನ ಹೆಸರು ಪ್ರೀತಂ. ಕಲಬುರಗಿ ಮೂಲದವ್ರು. ಅವನ ಪ್ರೀತಿಯನ್ನೇ ನಂಬಿ ಬಾಳ್ತಿದ್ದ ಇವಳು ಈಗ ಒಂಟಿಯಾಗಿದ್ದಾಳೆ.

ಹೌದು, ಪ್ರೀತಂ ಸಹೋದರಿ ಡೇಸಿ ಹತ್ತಿರ ಸುಶ್ಮೀತಾ ಟ್ಯೂಷನ್‌ಗೆ ಬರ್ತಿದ್ಲು. ಈ ವೇಳೆನೇ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದ. ಆದ್ರೆ ಸುಶ್ಮೀತಾ ಮನೆಯವರಿಗೆ ಈ ವಿಷಯ ಗೊತ್ತಾಗಿದ್ದಂತೆ ವಿರೋಧ ವ್ಯಕ್ತವಾಗಿದೆ. ಕಳೆದ ವರ್ಷ ಇಬ್ಬರೂ ಬೀದರ್‌ನಲ್ಲಿ ಮದುವೆಯಾಗಿ, ಬೆಂಗಳೂರಿಗೆ ಓಡಿ ಹೋಗಿ ವಾಸವಿದ್ರು. ಈ ವೇಳೆ ಒಂದ್‌ ದಿನ ಫೋನ್‌ ಮಾಡಿದ ಮಧ್ಯವರ್ತಿ ಮೆಹಬೂಬ್‌ ಇಬ್ಬರ ಮಧ್ಯೆ ಸಂಧಾನದ ಮಾತಾಡಿದ್ದಾರೆ. ಹೀಗಾಗಿ ಮೆಹಬೂಬ್‌ ಮಾತು ನಂಬಿ ಕಲಬುರಗಿಗೆ ಬಂದಿದ್ದಾರೆ ಪ್ರೇಮಿಗಳು. ಮನೆಯವ್ರಿಗೆ ಸರ್ಪ್ರೈಸ್‌ ಕೊಡೋಣ ಅಂತಾ ಈ ಜೋಡಿ ಅಂದುಕೊಂಡಿದ್ರಂತೆ.

ವಾಪಸ್‌ ಬಾರಮ್ಮ ಮಗಳೇ ಅಂತಾ ಕರೆದ್ಮೇಲೆ ಆಗಿದ್ದೇನು?

ಸಂಧಾನಕ್ಕೆ ಅಂತಾ ಫೋನ್‌ ಮಾಡಿ ಕರೆದ ಮೆಹಬೂಬ್‌, ಪ್ರೀತಂಗೆ ಮುಹೂರ್ತ ಇಟ್ಟಿದ್ದಾನೆ. ಮಾರ್ಚ್‌ 3ರ ರಾತ್ರಿ ಮಹೆಬೂಬ್ ಭೇಟಿಯಾಗಿದ್ದ ಪ್ರೀತಂ ಮಾತನಾಡಿ ಮನೆಗೆ ಬಂದಿದ್ದಾನೆ. ಇದಾದ ಬಳಿಕ ಮನೆಯವ್ರನ್ನ ಬಿಡೋಕೆ ಅಂತಾ ರೈಲ್ವೇ ಸ್ಟೇಷನ್‌ಗೆ ಹೋಗಿ, ವಾಪಸ್‌ ಬರಬೇಕಾದ್ರೆ, ಕಾದು ಕುಳಿತಿದ್ದ ಹುಡುಗಿ ಮನೆಯವ್ರು ಪ್ರೀತಂ ಹೊಟ್ಟೆಗೆ ಚಾಕು ಹಾಕಿ ಕೊಲೆ ಮಾಡಿದ್ದಾರೆ.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ