Breaking News

ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ನಕಲಿ ವಿಲ್​! ತಂದೆ ಹೆಸರಲ್ಲಿ ವಿಲ್​ ಸೃಷ್ಟಿಸಿ 50 ಕೋಟಿ ರೂ. ಆಸ್ತಿ ಕಬಳಿಸಿದ ಮಕ್ಕಳು

Spread the love

ಬೆಂಗಳೂರು: ತಂದೆ ಸಾವಿನ ಬಳಿಕ ಅವರ ಹೆಸರಿನಲ್ಲಿ ನಕಲಿ ವಿಲ್​(ಉಯಿಲು ಪತ್ರ) ಸೃಷ್ಟಿಸಿ ಮಲತಾಯಿಗೆ ಸೇರಬೇಕಿದ್ದ 50 ಕೋಟಿ ಮೌಲ್ಯದ ಆಸ್ತಿಯನ್ನ ಮಕ್ಕಳಿಬ್ಬರು ಕಬಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ರಾಜಾಜಿನಗರದ ಕೆ.

ಬೋಜಮ್ಮ (67) ಎಂಬುವರು ಕೊಟ್ಟ ದೂರಿನ ಮೇರೆಗೆ ಹಲಸೂರು ಗೇಟ್​ ಪೊಲೀಸರು ಮಕ್ಕಳಿಬ್ಬರನ್ನು ಬಂಧಿಸಿದ್ದಾರೆ. ಚೆನ್ನಪ್ಪ ಅವರಿಗೆ ಲಕ್ಷ್ಮಮ್ಮ ಮತ್ತು ಬೋಜಮ್ಮ ಪತ್ನಿಯರು. ಮೊದಲ ಪತ್ನಿಗೆ ಸುರೇಶ್​, ಮಹೇಶ್​ ಸೇರಿ ಮೂವರು ಮಕ್ಕಳು. ಬೋಜಮ್ಮಗೆ ಒಬ್ಬ ಪುತ್ರನಿದ್ದಾನೆ. 2014ರ ಜೂನ್​ನಲ್ಲಿ ಚೆನ್ನಪ್ಪ ಮೊಮ್ಮಕ್ಕಳಿಗೆ ವಿಲ್​ ಮಾಡಿದ್ದರು. ಈ ಪ್ರಕಾರ ಲಕ್ಷ್ಮಮ ಫೈನಾನ್ಸ್​ ಸಂಸ್ಥೆ ಬೋಜಮ್ಮಗೆ ಸೇರಬೇಕಿತ್ತು. 2019ರಲ್ಲಿ ಚೆನ್ನಪ್ಪ ಮೃತಪಟ್ಟರು. ಇದಾದ ಮೇಲೆ ಆರೋಪಿಗಳು, 2016ನೇ ಸಾಲಿನಲ್ಲಿ ಚೆನ್ನಪ್ಪ ವಿಲ್​ ಮಾಡಿದ್ದಾರೆ ಎಂದು ಒಂದೊಂದಾಗಿ ಗಾಂಧಿನಗರ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಡೆತತ್​ನೋಟ್​ ಸಲ್ಲಿಸಿ ಐದು ದೃಢೀಕೃತ ವಿಲ್​ ಪಡೆದಿದ್ದಾರೆ. ಇದರ ಆಧಾರದ ಮೇಲೆ ಲಕ್ಷ್ಮಮ್ಮರ ಫೈನಾನ್ಸ್​ ಸಂಸ್ಥೆಯನ್ನು ಸುರೇಶ್​ ಮತ್ತು ಮಹೇಶ್​ ತಮ್ಮ ಹೆಸರಿಗೆ ಅಧಿಕಾರವನ್ನು ವರ್ಗಾವಣೆ ಮಾಡಿಸಿಕೊಂಡು 50 ಕೋಟಿ ರೂ. ಆಸ್ತಿಯನ್ನು ಕಬಳಿಸಿದ್ದರು.

ಕೆಲವೇ ದಿನಕ್ಕೆ ಬೋಜಮ್ಮಗೆ ಈ ವಿಷಯ ತಿಳಿದು, ಫೈನಾನ್ಸ್​ ಸಂಸ್ಥೆಯ ಅಧಿಕಾರ ಹಸ್ತಾಂತರದ ಬಗ್ಗೆ ದಾಖಲೆ ಪರಿಶೀಲನೆ ನಡೆಸಿದಾಗ ಗಾಂಧಿನಗರ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಪಡೆದ ವಿಲ್​ ಪ್ರತಿ ಲಭ್ಯವಾಗಿದೆ. ಇದೇ ವಿಲ್​ ಪ್ರತಿಯನ್ನು ವಕೀಲರ ಮೂಲಕ ಪಡೆದ ಬೋಜಮ್ಮ ಪರಿಶೀಲನೆ ನಡೆಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹಲಸೂರು ಗೇಟ್​ ಠಾಣೆಗೆ ಬೋಜಮ್ಮ ದೂರು ನೀಡಿದ್ದರು.

ಬೇರೆಯವರ ವಿಲ್​ ನಕಲಿ ಮಾಡಿದ ಭೂಪರು: ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಎಂ.ಆರ್​. ಜಯರಾಮ್​ ಎಂಬುವರು, 2016-17ರಲ್ಲಿ ಇಂಗ್ಲಿಷ್​ನಲ್ಲಿ ವಿಲ್​ ಮಾಡಿದ್ದು, ಬುಕ್​ ನಂಬರ್​ 162/16-17ರಲ್ಲಿ ನೀಡಲಾಗಿದೆ. ಇದೇ ವಿಲ್​ ಪಡೆದ ಆರೋಪಿಗಳು, ಇಂಗ್ಲಿಷ್​ನಲ್ಲಿ ಇದ್ದ ವಿಷಯವನ್ನು ನಾಶ ಮಾಡಿ ಬದಲಿಗೆ ತಮಗೆ ಬೇಕಾದ ರೀತಿಯಲ್ಲಿ ಕನ್ನಡದಲ್ಲಿ ಟೈಪ್​ ಮಾಡಿಕೊಂಡಿದ್ದಾರೆ. ಚೆನ್ನಪ್ಪ ಫೋಟೋ ಮತ್ತು ಬೆರಳಚ್ಚು ಅಂಟಿಸಿದ್ದು, ಉಳಿದಂತೆ ಬುಕ್​ ನಂಬರ್​, ಸಿಡಿ ನಂಬರ್​ ಮತ್ತು ಸಾಕ್ಷಿದಾರರು, ಜಯರಾಮ್​ ಪಾವತಿಸಿದ್ದ ನೋಂದಣಿ ಶುಲ್ಕ ಚಲನ್​ ನಂಬರ್​ ಎಲ್ಲವೂ ಒಂದೇ ಆಗಿದೆ. ಕೇವಲ ಒಳಗಿದ್ದ ವಿಷಯವನ್ನು ಮಾತ್ರ ಬದಲು ಮಾಡಿಕೊಂಡಿದ್ದಾರೆ.

ಸಬ್​ ರಿಜಿಸ್ಟ್ರಾರ್​, ಸಿಬ್ಬಂದಿ ಕೈವಾಡ ಇಲ್ಲವೇ?: ವಿಲ್​ ಗೌಪ್ಯ ಮಾಹಿತಿ ಆಗಿದೆ. ವಿಲ್​ ಬರೆದ ವ್ಯಕ್ತಿ ಸತ್ತ ಮೇಲೆ ಅದನ್ನು ಬಹಿರಂಗ ಮಾಡಬೇಕು. ಡೆತ್​ನೋಟ್​ ಕೊಟ್ಟಾಗ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಪ್ರತಿ ಪಡೆಯಬೇಕು. ಅಮೆರಿಕದಲ್ಲಿ ಜೀವಂತವಾಗಿರುವ ಜಯರಾಮ್​ ವಿಲ್​ ಬಹಿರಂಗ ಮಾಡಿದವರು ಯಾರು? ಆರೋಪಿಗಳು, ಮಾಹಿತಿ ಹಕ್ಕು ಕಾಯ್ದೆಯಡಿ ಗಾಂಧಿನಗರ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಅರ್ಜಿ ಸಲ್ಲಿಸಿ 800 ರೂ. ಶುಲ್ಕ ಪಾವತಿಸಿದ್ದಾರೆ. ಅಲ್ಲಿನ ಅಧಿಕಾರಿ, ಸಿಬ್ಬಂದಿ ದೃಢೀಕೃತ 5 ವಿಲ್​ ಪ್ರತಿ ಕೊಟ್ಟಿದ್ದಾರೆ. ಅಂದರೆ, ಕಚೇರಿ ಒಳಗೆಯೇ ಕರಾಮತ್ತು ನಡೆದಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ವಿಕಾಸಸೌಧದಲ್ಲಿರುವ ರಾಜ್ಯ ಮಟ್ಟದ ಕಾವೇರಿ ಸರ್ವರ್​, ಕೊಡಿಗೇಹಳ್ಳಿಯಲ್ಲಿರುವ ಜಿಲ್ಲಾ ಸರ್ವರ್​ನಲ್ಲಿ ಅಸಲಿ(ಜಯರಾಮ್​ ವಿಲ್​) ಪ್ರತಿಯೇ ಇದೆ. ಆದರೆ, ಗಾಂಧಿನಗರದಲ್ಲಿ ಮಾತ್ರ ನಕಲಿ ವಿಲ್​ ಕೊಡುತ್ತಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸುರೇಶ್​ ಕುಮಾರ್​, ಮಹೇಶ್​ ಕುಮಾರ್​ ಮತ್ತು ಗಾಂಧಿನಗರ ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿ 11 ಆರೋಪಿಗಳ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಪ್ರಾಥಮಿಕ ತನಿಖೆ ವೇಳೆ ನಕಲಿ ವಿಲ್​ ಸೃಷ್ಟಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಕ್ಕಳಾದ ಸುರೇಶ್​ ಮತ್ತು ಮಹೇಶ್​ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆರೋಪಿಗಳು ಜಾಮೀನು ಪಡೆದಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ