Breaking News

ಅಧಿಕಾರಿಯ ಲಂಚದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳ ದಾಳಿ ವೇಳೆ ಲಕ್ಷಾಂತರ ರೂಪಾಯಿ ಹಣವೂ ಪತ್ತೆ

Spread the love

ಧಾರವಾಡ: ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳ ದಾಳಿ ವೇಳೆ ಲಕ್ಷಾಂತರ ರೂಪಾಯಿ ಹಣವೂ ಪತ್ತೆಯಾಗಿದೆ.

ಸಣ್ಣ ನೀರಾವರಿ ಇಲಾಖೆಯ ಧಾರವಾಡ ಉಪವಿಭಾಗದಲ್ಲಿನ ತನಿಖಾ ವಿಭಾಗದ ಎಇಇ ಪ್ರಶಾಂತ್ ನಗದು ಸಹಿತ ಸಿಕ್ಕಿಬಿದ್ದ ಅಧಿಕಾರಿ.

ಇವರು ಅದೇ ಇಲಾಖೆಯ ಇನ್ನೊಬ್ಬ ಅಧಿಕಾರಿ ಶಿವಪ್ಪ ಮಂಜಿನಾಳಗೆ ಹಸ್ತಾಂತರಿಸಬೇಕಿದ್ದ ಲಂಚದ ಹಣವನ್ನು ವಿದ್ಯಾಗಿರಿ ಸತ್ತೂರ ಕಾಲನಿಯಲ್ಲಿರುವ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು.

ಶಿವಪ್ಪ ಮಂಜಿನಾಳನ ಸೋದರನ ಮಗ ಮಹಾಂತೇಶ ಮಂಜಿನಾಳ ಪ್ರಶಾಂತ್ ಮನೆಯಲ್ಲಿದ್ದ ಹಣವನ್ನು ವಿಜಯಪುರ ಜಿಲ್ಲೆಯ ಕಂದಗನೂರ ಗ್ರಾಮಕ್ಕೆ ಕೊಂಡೊಯ್ಯಲು ಮನೆಯಿಂದ ಹೊರಬರುತ್ತಿದ್ದಂತೆ ಸಿಕ್ಕಿಬಿದ್ದಿದ್ದಾನೆ. ಆಗ ಮಹಾಂತೇಶ 16 ಲಕ್ಷ ರೂ. ಸಹಿತ ಸಿಕ್ಕಿಬಿದ್ದಿದ್ದು, ಅಧಿಕಾರಿಗಳು ನಂತರ ಪ್ರಶಾಂತ್​ ಮನೆ ಮೇಲೆ ದಾಳಿ ನಡೆಸಿದಾಗ 1.8 ಲಕ್ಷ ರೂ. ಸಿಕ್ಕಿದೆ. ಮೂವರನ್ನೂ ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ನಟ ವಿಷ್ಣುವರ್ಧನ್, ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ

Spread the loveಬೆಂಗಳೂರು: ನಟ ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ