ಬೆಂಗಳೂರು : ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಾಲ ಮರುಪಾವತಿಗೆ ಅವಧಿಯನ್ನು ಜೂನ್ 1ರವರೆಗೆ ವಿಸ್ತರಣೆ ಮಾಡಲಾಗಿದೆ.
ಸಹಕಾರ ಸಚಿವ ಎಸ್.ಟಿ.
ಸೋಮಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್ 1 ರಿಂದ ಜೂ. 30 ರ ಅವಧಿಯಲ್ಲಿ ಮರು ಪಾವತಿಗೆ ಬರುವ ಸಾಲದ ಕಂತುಗಳನ್ನು ಪಾವತಿಸುವ ಅವಧಿಯನ್ನು ಈ ವರ್ಷದ ಜೂ. 1ರವರೆಗೆ ವಿಸ್ತರಿಸಲಾಗಿದೆ. ಸಂಬಂಧಿಸಿದ 134 ಕೋಟಿ ರೂ. ಬಡ್ಡಿ ಸಹಾಯಧನ ಸರ್ಕಾರ ಭರಿಸುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟ ರೈತರ ಪೈಕಿ 10437 ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುತ್ತಾರೆ. ಈ ಎಲ್ಲ ರೈತರಿಗೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 1.50 ಲಕ್ಷ ರೂಐ. ನೆರವು ನೀಡಲಾಗಿದೆ