Breaking News

ಶೋಟೋಕಾನ್ ಕರಾಟೆಯಲ್ಲಿ ಬೆಳಗಾವಿ ಪಟುಗಳ ವಿಶೇಷ ಸಾಧನೆ

Spread the love

ಶೋಟೋಕಾನ್‍ಕರಾಟೆಡೋ ಅಸೋಸಿಯೇಷನ್ ಆಫ್‍ಇಂಡಿಯಾದಕರ್ನಾಟಕಶಾಖೆಯುಬೆಳಗಾವಿಯಲ್ಲಿ ಆಯೋಜಿಸಿದ್ದಓಪನ್‍ಕರಾಟೆ ಚಾಂಪಿಯನ್‍ಶಿಪ್-2022 ರಲ್ಲಿವಿಜಯನಗರ-ಹಿಂಡಲಗಾಶಾಖೆಯಶೋಟೋಕಾನ್‍ಕರಾಟೆಕ್ರೀಡಾಸಂಘದಕರಾಟೆ ಪಟುಗಳು ವಿವಿಧವಿಭಾಗಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.

ಬೆಳಗಾವಿಯ ಖಾನಾಪುರರಸ್ತೆಯ ಬ್ರಹ್ಮನಗರದ ಲಕ್ಷ್ಮೀ ಸಭಾಂಗಣದಲ್ಲಿ ಶೋಟೋಕಾನ್‍ಕರಾಟೆಡೋ ಅಸೋಸಿಯೇಶನ್ ಕರ್ನಾಟಕ ಶಾಖೆಯಿಂದಜಿಲ್ಲಾ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳಗಾವಿ, ಸಾಂಗಲಿ, ಕೊಲ್ಲಾಪುರ, ಚಂದಗಡ, ಖಾನಾಪುರದಕರಾಟೆ ಪಟುಗಳು ಭಾಗವಹಿಸಿದ್ದರು. ವಿಜಯನಗರ-ಹಿಂಡಲಗಾ ಶಾಖೆಯ ಶೋಟೊಕಾನ್‍ಕರಾಟೆಕ್ರೀಡಾ ಸಂಘದವರು ವಿವಿಧ ವಿಭಾಗಗಳಲ್ಲಿ ಪದಕ ಗಳಿಸಿದರು.

ಅತಿಥಿಗಳಿಂದ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ನೀಡಿಗೌರವಿಸಲಾಯಿತು.6 ವರ್ಷದೊಳಗಿನವರ ವಿಭಾಗದಲ್ಲಿಧನ್ವಿ ಮೋರ್ಜಕರ್, 8 ವರ್ಷದೊಳಗಿನವರ ವಿಭಾಗದಲ್ಲಿ ಸಂಕಮ್ ಪಾಟೀಲ್, 9 ವರ್ಷದೊಳಗಿನವರ ವಿಭಾಗದಲ್ಲಿ ಪವಿತ್ರಾ ಸಾಳುಂಕೆ, ವೈಭವಿ ಮೊರಾಜ್ಕರ್, 10 ವರ್ಷದೊಳಗಿನವರ ವಿಭಾಗದಲ್ಲಿ ಶ್ರೇಯಶ್‍ಕುಂಡೆಕರ, ಸ್ಫೂರ್ತಿ ನಂದವಾಡೇಕರ್, ಭಕ್ತಿ ಭೋವಿ, ನೇಹಾಲ್ ಪಾಟೀಲ್. 11 ವರ್ಷವಯಸ್ಸಿನವರು, ಓಂಕಾರ್ ಶಿಂಧೆ, ಶುಭಂ ಸಾಳುಂಕೆ, ನಿಕ್ಸಿ ಲಿಮಾ, ಯಶ್ ಮೆನ್ಸೆ, ಯೋಗೇಶ್‍ಚಲ್ವೆಟ್ಕರ್‍ಅವರುಕಟಾ, ಕುಮಿಟೆ ಇತ್ಯಾದಿಗಳಲ್ಲಿ ಚಿನ್ನಗೆದ್ದರು.

ಈ ಕರಾಟೆ ಪಟುಗಳು ಬೋಧಕರಾದ ಭರಮಣಿ ಮಲ್ಲಪ್ಪ ಪಾಟೀಲ ಹಾಗೂ ಚಲವೆನಹಟ್ಟಿಅವರ ಮಾರ್ಗದರ್ಶನದಲ್ಲಿಅಭ್ಯಾಸ ಮಾಡುತ್ತಿದ್ದಾರೆ.ಈ ಸಾಧನೆಗಾಗಿಅವರನ್ನುಅಭಿನಂದಿಸಲಾಗುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ