ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಸುಮಾರು 50 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಹಾಟ್ಲೈನ್ ಮೂಲಕ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ.
ವಿಶ್ವ ಸಂಸ್ಥೆಯ ವೋಟಿಂಗ್ನಲ್ಲಿ ಭಾರತ ತಟಸ್ಥ ನಿಲುವು ತಾಳಿದ್ದಕ್ಕೆ ಹಾಗೂ ಭಾರತ ರಷ್ಯಾ ವಿರುದ್ಧ ಮತ ಚಲಾಯಿಸದೆ, ಮತದಾನದಿಂದ ದೂರ ಉಳಿದಿದ್ದಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಿಗ್ ಆಫರ್ ನೀಡಿದ್ದಾರೆ.
ಕಡಿಮೆ ಬೆಲೆಯಲ್ಲಿ ಶೇ.25 ರಿಂದ ಶೇ.27 ವರೆಗೆ ರಿಯಾಯಿತಿಯಲ್ಲಿ ಕಚ್ಚಾ ತೈಲ ಪೂರೈಕೆ ಮಾಡುವ ಆಫರ್ ನೀಡಿದ್ದಾರೆ. ಇದರ ಜೊತೆಗೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
Laxmi News 24×7