Breaking News

ಮಹಿಳೆಯರ ಹಕ್ಕುಗಳನ್ನು ಕಸಿಯಬೇಡಿ’: ಸಮಾನ ಮನಸ್ಕ ಮಹಿಳೆಯರು

Spread the love

ಬೆಂಗಳೂರು: ‘ಹಿಂದುತ್ವವಾದ ಯುವಜನರ ಮನಸ್ಸು ಹೊಕ್ಕಿದೆ. ಇದರಿಂದ ಜಾತೀವಾದಿ ಮತ್ತು ಧರ್ಮಾಧಾರಿತ ಬಹಿಷ್ಕಾರಗಳು ಹೆಚ್ಚಾಗುತ್ತಿವೆ. ಶತಮಾನಗಳ ಹೋರಾಟದಿಂದ ಪಡೆದಿರುವ ಹಕ್ಕುಗಳನ್ನು ಪುನಃ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ’ ಎಂದು ಸಮಾನ ಮನಸ್ಕ ಮಹಿಳೆಯರು ಕಳವಳ ವ್ಯಕ್ತಪಡಿಸಿದರು.

 

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಘನತೆ, ಶಿಕ್ಷಣ, ಆಯ್ಕೆ, ಬಹುತ್ವ ಹಾಗೂ ಶಾಂತಿಗಾಗಿ ಎಲ್‌.ಜಿ.ಬಿ.ಟಿ.ಕ್ಯೂ.ಐ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯೆಯರು ವಿಠಲ್‌ ಮಲ್ಯ ವೃತ್ತದ ಬಳಿಯ ಕೆಫೆ ಕಾಫಿ ಡೇಯಿಂದ ಪುರಭವನದವರೆಗೂ ಕಾಲ್ನಡಿಗೆ ಜಾಥ ಹಮ್ಮಿಕೊಂಡಿದ್ದರು.

‘ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ ಸಹಿಸುವುದಿಲ್ಲ’, ‘ಘನತೆಯ ಬದುಕಿಗಾಗಿನ ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ’, ‘ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು; ಘನತೆಯ ಬದುಕು ನಮ್ಮ ಹಕ್ಕು’, ‘ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸಬೇಡಿ’ ಎಂಬ ಭಿತ್ತಿಪತ್ರಗಳು ಮೆರವಣಿಗೆಯಲ್ಲಿ ರಾರಾಜಿಸಿದವು.

‘ಶೈಕ್ಷಣಿಕ ಹಾಗೂ ಉಡುಪು ಆಯ್ಕೆಯ ಹಕ್ಕುಗಳೆರಡರ ನಡುವೆ ಒಂದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಮಹಿಳೆಯರ ಮೇಲೆ ಒತ್ತಡ ಹೇರಬಾರದು. ಸರ್ಕಾರ ನಮ್ಮ ಹಕ್ಕನ್ನು ರಕ್ಷಿಸಬೇಕು. ತರಗತಿ ಪ್ರವೇಶ ನಿರಾಕರಿಸಲ್ಪಟ್ಟಿರುವ ಎಲ್ಲ ಬಾಲಕಿಯರಿಗೂ ಶಾಲೆಗಳಲ್ಲಿ ಹಾಜರಾತಿ ನೀಡಬೇಕು. ಪರಿಹಾರ ಬೋಧನೆಯ ಮೂಲಕ ಕಲಿಕಾ ನಷ್ಟವನ್ನು ನಿವಾರಿಸಬೇಕು. ಲೈಂಗಿಕ, ಧಾರ್ಮಿಕ ಹಾಗೂ ಜಾತಿ ತಾರತಮ್ಯಗಳನ್ನು ನಿಲ್ಲಿಸಿ ನಮ್ಮ ಸಾಂವಿಧಾನಿಕ ಮೌಲ್ಯಗಳು ಹಾಗೂ ಈ ನಾಡಿನ ಬಹುತ್ವದ ವೈವಿಧ್ಯಮಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು’ ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ