Breaking News

‘ಪಂಚಮಸಾಲಿ ಮೀಸಲಾತಿ: ಅವಸರ ಪಟ್ಟರೆ ಸಂಕಷ್ಟ’: ವಚನಾನಂದ ಸ್ವಾಮೀಜಿ

Spread the love

ಹರಿಹರ : ‘ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯದವರಿಗೆ ನ್ಯಾಯಯುತವಾಗಿ 2ಎ ಮೀಸಲಾತಿ ದೊರೆಯಬೇಕು.

ಆದರೆ ಮೀಸಲಾತಿ ದೊರಕಿಸಲು ಅವಸರ ಪಟ್ಟರೆ ಸಂಕಷ್ಟ ಎದುರಾಗಬಹುದು’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಭಾನುವಾರ ನಡೆದ ರಾಜ್ಯ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜಕ್ಕೆ 2ಎ ಮೀಸಲಾತಿಗಾಗಿ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧವಾಗಿದ್ದೇವೆ. ಈ ದಿಸೆಯಲ್ಲಿ ಹಿಂದುಳಿದ ಆಯೋಗದ ಮುಂದೆ ನಮ್ಮ ವಾದ ಮಂಡನೆ ಮಾಡುತ್ತಿದ್ದೇವೆ. ಹೋರಾಟದಿಂದ ಹಿಂದೆ ಬಿದ್ದಿಲ್ಲ. ಆದರೆ ಹಾದಿ, ಬೀದಿ ಹೋರಾಟ ಮಾಡಿ ಅವಸರದಲ್ಲಿ ಮೀಸಲಾತಿ ಪಡೆದರೆ ಸಂಕಷ್ಟ ಎದುರಾಗಬಹುದು. ಮಹಾರಾಷ್ಟ್ರದಲ್ಲಿ ಮರಾಠಿ ಜನಾಂಗದವರಿಗೆ ಮೀಸಲಾತಿ ಘೋಷಿಸಿದರೂ ಲಾಭ ದೊರೆಯದಂತಾಗಿದೆ. ಅಂತಹ ಸ್ಥಿತಿ ನಮಗೂ ಎದುರಾಗಬಾರದು ಎಂದು ಸಂಯಮದಿಂದ ಹೆಜ್ಜೆ ಇಡುತ್ತಿದ್ದೇವೆ’ ಎಂದು ಹೇಳಿದರು.

‘ನಾವು ವಿಐಪಿ ಸ್ವಾಮೀಜಿಯೇ. ಇದರಲ್ಲಿ ತಪ್ಪೇನಿದೆ? ವಿಐಪಿ ಎಂದರೆ ವೆರಿ ಇಂಪಾರ್ಟೆಂಟ್ ಪಂಚಮಸಾಲಿ ಸ್ವಾಮೀಜಿ’ ಎಂದು ಹೇಳುವ ಮೂಲಕ ತಮ್ಮನ್ನು ವಿಐಪಿ, ಹೈಫೈ ಸ್ವಾಮೀಜಿ ಎನ್ನುವವರಿಗೆ ವಚನಾನಂದ ಸ್ವಾಮೀಜಿ ತಿರುಗೇಟು ನೀಡಿದರು.

ಏ.20ರಿಂದ 24ರವರೆಗೆ ಹರ ಜಾತ್ರೆ: ಏ.20ರಿಂದ 24ರವರೆಗೆ ಹರಜಾತ್ರೆ ಮಹೋತ್ಸವ ಆಚರಿಸಲಾಗುವುದು. ಈ ಬಾರಿ ಉದ್ಯೋಗ ಮೇಳ ನಡೆಸಲಿದ್ದು, 100 ಖಾಸಗಿ ಕಂಪನಿಗಳು ಭಾಗವಹಿಸಲು ಒಪ್ಪಿಗೆ ಸೂಚಿಸಿವೆ ಎಂದು ಸ್ವಾಮೀಜಿ ಹೇಳಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ