ರಾಯಚೂರು: ರಷ್ಯಾದಿಂದ ಉಕ್ರೇನ್ ಮೇಲೆ ಯುದ್ಧ ಸಾರಿದ ನಂತ್ರ, ಉಕ್ರೇನ್ ನಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಭಯ, ಆತಂಕ ಹುಟ್ಟಿಸುತ್ತಿದೆ. ಯುದ್ಧದ ಭೀತಿಯ ನಡುವೆಯ ಉಕ್ರೇನ್ ನಲ್ಲಿ ಸಿಲುಕಿರುವಂತ ಕನ್ನಡಿಗ ವಿದ್ಯಾರ್ಥಿಗಳು ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ.ಅಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎನ್ನುವ ಬಗ್ಗೆ ಇಂಚಿಂಚೂ ಮಾಹಿತಿಯನ್ನು ರಾಯಚೂರು ವಿದ್ಯಾರ್ಥಿ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಉಕ್ರೇನ್ ನಲ್ಲಿನ ಬಂಕರ್ ನಲ್ಲಿ ಆಶ್ರಯ ಪಡೆದಿರುವಂತ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ವಿದ್ಯಾರ್ಥಿ ಪ್ರಜ್ವಲ್ ಕುಮಾರ್ ಮಾತನಾಡಿ, ಉಕ್ರೇನ್ ದೇಶದ ಖಾರ್ಕೀವ್ ಗೆ ರಷ್ಯ ಸೇನೆ ನುಗ್ಗಿದೆ. ನಾವು ಸುರಕ್ಷತೆಗಾಗಿ ಬಂಕರ್ ಗಳಲ್ಲಿ ಇದ್ದೇವೆ. ಆದ್ರೇ ಇಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಏನ್ ಮಾಡಬೇಕೋ ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾನೆ.
ನಾವು ಗಡಿ ಪ್ರದೇಶದಿಂದ ಸುಮಾರು 1,400 ಕಿಲೋಮೀಟರ್ ದೂರದಲ್ಲಿ ಇದ್ದೇವೆ. ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ, ಶೆಲ್ ದಾಳಿ, ಬಾಂಬ್ಲ್ ಬ್ಲಾಸ್ಟ್ ಸದ್ದು ನಮ್ಮನ್ನು ನಡುಗಿಸುತ್ತಿದೆ. ಸರಿಯಾಗಿ ನೀರು ಸಿಗ್ತಾ ಇಲ್ಲ, ಊಟವೂ ಇಲ್ಲ. ನಮ್ಮನ್ನು ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾನೆ.