ಚಿಕ್ಕೋಡಿ: ಯುವಕನೊಬ್ಬ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿದ್ದಾನೆ. ಈತನ ಸಾಧನೆ ಕಂಡು ಚಿಕ್ಕೋಡಿ ಜನರು ಹುಬ್ಬೇರಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬರಮಖೋಡಿ ಗ್ರಾಮದ ಅನಿಲ್ ಕಾಬು ಜಾಧವ್ ಸಾಧನೆ ಮಾಡಿದ ಯುವಕ. ಆತನೊಬ್ಬನೇ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕ ಇಷ್ಟೇ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 9 ಗಂಟೆ 30 ನಿಮಿಷ ಸಮಯ ತಗೊಂಡಿದ್ದನು.