ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು
ಗಜಾನನ ನಾಯಿಕ್ ಕೊಲೆಯಾದ ದುರ್ದೈವಿ. ಸುಮಾರು ಅನೇಕ ವರ್ಷಗಳಿಂದ ಗಜಾನನ ನಾಯಕ್ ಹಾಗೂ ಅವರ ಪತ್ನಿ ಬೇರೆಯಾಗಿಯೇ ವಾಸಮಾಡುತ್ತಿದ್ದರು. ಗಜಾನನ ತಮ್ಮ ಮಗನೊಂದಿಗೆ ವಾಸ ಮಾಡುತ್ತಿದ್ದರು. ನಿನ್ನೆ ಮಗ ಉಜಗಾಂವ್‍ಗೆ ಹೋದ ಸಂದರ್ಭದಲ್ಲಿ ಇಂದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ತಂದೆ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಡಿಸಿಪಿ ರವಿಂದ್ರ ಗಡಾದಿ, ಎಸಿಪಿ ಗಣಪತಿ ಗುಡಾಜಿ, ಸಿಪಿಐ ಸುನೀಲ್ ಕುಮಾರ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆ ಮಾಡಿರುವ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.