ಇಂದು ಬೆಳಗ್ಗೆ 7ರಿಂದ 4ಗಂಟೆಯವರೆಗೆ ಮಣಿಪುರದ 38 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ.
28 ವಿಧಾನ ಕ್ಷೇತ್ರಗಳಲ್ಲಿ ಕಣಿವೆ ಜಿಲ್ಲೆಗಳಾದ 29 ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಬಿಷ್ಣುಪುರವಾಗಿದ್ದರೆ, ಉಳಿದ 9 ಕ್ಷೇತ್ರಗಳು ಚರ್ಚಂಡ್‍ಪುರ, ಕಾಂಗ್‍ಪೋಕ್ಪಿ ಮತ್ತು ಫರ್ಜಾಲ್ ಪ್ರದೇಶದಲ್ಲಿದೆ. ಮಣಿಪುರದ ವಿಧಾನಸಭೆ ಚುನಾವಣೆಯೂ 2ಹಂತದಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ನಡೆಯುವ ಮತದಾನ ಸಂಜೆ 4ಗಂಟೆಗೆ ಕೊನೆಗೊಳ್ಳಲಿದೆ.
ಮೊದಲ ಹಂತದಲ್ಲಿ 15 ಮಹಿಳೆಯರು ಸೇರಿದಂತೆ ಒಟ್ಟು 173 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಮತ್ತು ಹೀಂಗಾಂಗ್‍ನ ಬಿಜೆಪಿ ಅಭ್ಯರ್ಥಿ ಎನ್. ಬಿರೇನ್ ಸಿಂಗ್, ಸಚಿವರಾದ ತೊಂಗಮ್ ಬಿಸ್ವಜಿತ್ ಸಿಂಗ್, ಸಿಂಗ್‍ಜಮೇಯ್‍ನಿಂದ ಸ್ಪೀಕರ್ ವೈ. ಖೇಮ್‍ಚಂದ್ ಸಿಂಗ್, ಉಪ ಮುಖ್ಯಮಂತ್ರಿ ಮತ್ತು ಎನ್‍ಪಿಪಿ ಅಭ್ಯರ್ಥಿ ಯುಮ್ನಮ್ ಜಾಯ್‍ಕುಮಾರ್ ಉರಿಪೋಕ್ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ನಂಬೋಲ್ ಅವರು ಇಂದು ನಡೆಯುವ ಮೊದಲ ಹಂತದ ಮತದಾನದಲ್ಲಿ ಸ್ಪರ್ಧಿಸಲಿದ್ದಾರೆ.
Laxmi News 24×7