ಹಾಗೇ ಯುವಕರಲ್ಲಿ ಹೃದ್ರೋಗ ಸಮಸ್ಯೆ(Heart disease) ಕೂಡ ಹೆಚ್ಚಾಗಿದೆ. ಜೀವನಶೈಲಿಯಲ್ಲಾದ ಬದಲಾವಣೆಯಿಂದಾಗಿ ಪ್ರಸ್ತುತ ಪೀಳಿಗೆ ಹೃದಯರೋಗದಂತಹ ಅನೇಕ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿಂದೆ 65ಕ್ಕಿಂತ ಹೆಚ್ಚಿನ ವಯೋಮಾನದ ಮೇಲ್ಪಟ್ಟ ಜನರಲ್ಲಿ ಹೃದಯ ರೋಗದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗೀಗ ಹೃದಯರೋಗ 25 ರಿಂದ 30 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆಲ್ಲ ಕಾರಣ ಆಹಾರ ಪದ್ಧತಿಯಲ್ಲಾದ (Dieting) ಬದಲಾವಣೆ, ಪಾಶ್ಚಿಮಾತ್ಯ ಶೈಲಿಯ ಅನುಕರಣೆ, ಹೊತ್ತಲ್ಲದ ಹೊತ್ತಲ್ಲಿ ಊಟ ಮಾಡುವುದು. ಹೀಗೆ ನಾನಾ ಕಾರಣಗಳಿಂದ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ ವೈದ್ಯರು.
ಒಂದು ಅಂಕಿ ಅಂಶದ ಪ್ರಕಾರ ಮಾದಾಪುರದ ಕಾರ್ಪೋರೇಟ್ ಆಸ್ಪತ್ರೆಗೆ ಈ ವರ್ಷ 6,731 ಜನರು ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಲ್ಲಿ 22 ಪ್ರತಿಶತ 30 ಮತ್ತು 45 ರ ನಡುವಿನ ವಯಸ್ಸಿನವರು ಎಂಬುದು ಆಘಾತಕಾರಿ ವಿಷಯವಾಗಿದೆ. ಇನ್ನು ಶೇ 48 ರಷ್ಟು ರೋಗಿಗಳು 46 ಮತ್ತು 60ರ ವಯಸ್ಸಿನವರಾಗಿದ್ದಾರೆ. ಉಳಿದ ಶೇ 30 ರಷ್ಟು ಜನ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಪ್ರತಿ ವರ್ಷ, ಹೈದರಾಬಾದ್‌ನಲ್ಲಿ 10,000 ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ರೋಗಿಗಳು 40 ರಿಂದ 50 ವರ್ಷ ವಯಸ್ಸಿನವರು ಎಂಬುದು ಗಮನಾರ್ಹ ವಿಷಯವಾಗಿದೆ.
ಹೃದಯಾಘಾತದ ಯಾಕೆ ಸಂಭವಿಸುತ್ತೆ?
ಆಧುನಿಕ ಜೀವನಶೈಲಿಯು ಅನೇಕರಿಗೆ ಒತ್ತಡ, ಚಡಪಡಿಕೆಯನ್ನುಂಟು ಮಾಡುತ್ತದೆ. ಇನ್ನು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಒತ್ತಡಕ್ಕೆ ಒಳಗಾಗುವ ವ್ಯಕ್ತಿ, ಬಳಲಿಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ದಿನನಿತ್ಯದ ಉದ್ವಿಗ್ನತೆಗಳನ್ನು ನಿಭಾಯಿಸಲು ಜನ ಮದ್ಯ ಮತ್ತು ಸಿಗರೇಟ್‌ಗಳ ಮೊರೆ ಹೋಗ್ತಾರೆ. ಅಷ್ಟೇ ಏಕೆ ವಿರಾಮಕ್ಕಾಗಿ ಇಂತಹ ಅನಾರೋಗ್ಯಕರ ಹವ್ಯಾಸಗಳ ದಾಸರಾಗುತ್ತಾರೆ.
Heart Attack: ಮಹಿಳೆಯರೇ ಕೇಳಿ, ಇದು ‘ಹೃದಯ’ಗಳ ವಿಷಯ! ಪ್ರತಿ ನಿಮಿಷಕ್ಕೊಬ್ಬಳು ಹೃದಯಾಘಾತಕ್ಕೆ ಬಲಿ
ಕೆಲಸದ ಒತ್ತಡ, ನೈಟ್ ಡ್ಯೂಟಿ
ಮತ್ತೊಂದೆಡೆ ಈಗಿ ಕೆಲಸದ ಒತ್ತಡ, ರಾತ್ರಿ ಪಾಳೆಯ ಕೆಲಸಗಳಿಂದಾಗಿ ಮನುಷ್ಯನ ನಿದ್ರಾ ಚಕ್ರವೂ ಬದಲಾಗಿದೆ. ಇದು ನಾನಾ ತೊಂದರೆಗಳಿಗೆ ಕಾರಣವಾಗಿದೆ. ಅದಕ್ಕೆ ಇಂಬು ನೀಡುವಂತೆ ಹೆಚ್ಚೆಚ್ಚು ಮೊಬೈಲ್ ಬಳಕೆಯೂ ನಿದ್ರಾ ಹೀನತೆಗೆ ಕಾರಣವಾಗಿದೆ. ಇದು ನಿದ್ರೆಯ ಕೊರತೆಯನ್ನುಂಟು ಮಾಡಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ
ಕೆಟ್ಟ ಚಟಗಳಿಗೆ ದಾಸರಾಗೋದು ಬಿಡಿ
ಮತ್ತೊಂದು ಪ್ರಮುಖ ಅಂಶ ಎಂದರೆ, ಧೂಮಪಾನವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯುವಕರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪ್ರವೃತ್ತಿಯೂ ಹೆಚ್ಚುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಒತ್ತಡ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಧೂಮಪಾನ ಮತ್ತು ಮದ್ಯಪಾನವು ಹೃದಯರೋಗಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ
Heart Health: ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಇವು ಬದಲಾಗಲೇಬೇಕು..!
ಅನಾರೋಗ್ಯಕರ ಹವ್ಯಾಸಗಳಿಂದಾಗಿ ಜನರು, ರಾತ್ರಿಯಲ್ಲಿ ಉಸಿರಾಟದ ತೊಂದರೆಗೊಳಗಾಗುತ್ತಿದ್ದಾರೆ. ಪಲ್ಮನರಿ ಎಂಬಾಲಿಸಮ್ ಎಂಬ ಅಂಶ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಒಂದು ಅಂಶವಾಗಿ ಕಾಡಬಹುದು. ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದಾಗಿ ಹೃದಯಕ್ಕೆ ರಕ್ತ ಪರಿಚಲನೆ ಆಗದೇ ಹೃದಯ ಸ್ತಂಭನ ಸಂಭವಿಸುವ ಸಾಧ್ಯತೆ ಇದೆ.
ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಅಪಾಯದ ಸೂಚನೆ
ಉಸಿರುಗಟ್ಟುವಿಕೆಯಿಂದಾಗಿ ಗಂಟಲಿನ ಮೃದು ಅಂಗಾಂಶಗಳು ವಿಶ್ರಾಂತಿ ಪಡೆಯಲು ಆರಂಭಿಸುವುದರಿಂದ ವಾಯುಮಾರ್ಗಗಳು ಕಿರಿದಾಗುತ್ತಾ ಸಾಗುತ್ತವೆ ಇಲ್ಲವೇ ಮುಚ್ಚಲ್ಪಡುತ್ತವೆ. ಇದು ಉಸಿರಾಟವನ್ನೇ ನಿಲ್ಲಿಸಬಹುದು. ಇನ್ನು ಸ್ಥೂಲಕಾಯತೆಯಿಂದ ಬಳಲುತ್ತಿರುವವರು, ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಗೊರಕೆ, ರಾತ್ರಿಯಲ್ಲಿ ಹಠಾತ್ ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡ ಹೃದಯ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದರಬೇಕು. ಹಾಗೂ ಈ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಉತ್ತಮ.