Breaking News

ಬಿಜೆಟ್ ನಲ್ಲಿ ಏನಿದೆ ಅನ್ನೋದನ್ನ ಹೇಳೋದು ತಪ್ಪಾಗುತ್ತೆ ಅದರ ಬಗ್ಗೆ 4 ರಂದು ನೋಡಿ: ಬೊಮ್ಮಾಯಿ

Spread the love

ರಾಜ್ಯ ಬಜೆಟ್ ಮಾ.4 ರಂದು ನಡೆಯುತ್ತೆ. ಎಲ್ಲೆಲ್ಲಿ ಯಾವ ಪ್ರದೇಶಕ್ಕೆ ಏನಾಗುತ್ತೆ ಗೊತ್ತಾಗುತ್ತೆ. ಬಿಜೆಟ್ ನಲ್ಲಿ ಏನಿದೆ ಅನ್ನೋದನ್ನ ಹೇಳೋದು ತಪ್ಪಾಗುತ್ತೆ
ಅದರ ಬಗ್ಗೆ 4 ರಂದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಎಸ್ ಡಿ ಪಿ ಐ, ಪಿಎಫ್ಐ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ,‌ ಎಲ್ಲ ಘಟನೆಗಳನ್ನು
ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಘಟನೆಗಳು ಸೇರಿದಂತೆ, ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವುದು, ಮತೀಯ ದ್ವೇಷ ಬಿತ್ತುವಂತದ್ದನ್ನ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಾರೆ. ಅದರ ಆಧಾರದ ಮೇಲೆ ಬರುವಂತಹ ದಿನದಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

ಕಾಂಗ್ರೆಸ್ ಮೇಕೆದಾಟು ಹೋರಾಟ, ಅದು ರಾಜಕೀಯ ಪಾದಯಾತ್ರೆ. ಅವರು ಮೊದಲು ಮಾಡಿದ್ದು ಅದನ್ನೇ, ಈಗ ಮಾಡೋದು ಅದನ್ನೇ. ಅವರ ಕಾಲದಲ್ಲಿ ಡಿಪಿಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಬಂದ ಮೇಲೆ ಡಿಪಿಆರ್ ಸಿದ್ಧವಾಯ್ತು. ಹೀಗಾಗಿ ಯಾವ ನೈತಿಕ ಆಧಾರದ ಮೇಲೆ ಹೀಗೆ ಹೇಳ್ತಾರೆ ಎಂದು ಪಾದಯಾತ್ರೆಗೆ ತಿರುಗೇಟು ನೀಡಿದರು.

ಉಕ್ರೇನ್ ನಲ್ಲಿ ವಿದ್ಯಾರ್ಥಿಗಳು ಸಿಲುಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಪೂರ್ವ ಭಾಗದಲ್ಲಿ ಹೆಚ್ಚು ಅಲ್ಲೇ ವಿದ್ಯಾರ್ಥಿಗಳಿದ್ದಾರೆ‌ ಯುದ್ಧದ ತೀವ್ರತೆ ಕಡಿಮೆ ಆದ ತಕ್ಷಣ ಪುಟಿನ್ ಜೊತೆ ಮೋದಿ ಮಾತನಾಡಲಿದ್ದಾರೆ.
ಈಗಾಗಲೇ ಕೇಂದ್ರ ವಿದೇಶಾಂಗ ಸಚಿವರು ಸಂಪರ್ಕದಲ್ಲಿದ್ದಾರೆ ಎಂದರು.


Spread the love

About Laxminews 24x7

Check Also

ಗೌರಿ ಹುಣ್ಣಿಮೆಯಿಂದ ಛಟ್ಟಿ ಅಮವಾಸ್ಯೆವರೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ

Spread the love ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ