Breaking News

ಶತಕದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

Spread the love

ಕೋವಿಡ್ ಆತಂಕದ ನಡುವೆಯೂ ಬಿಡುಗಡೆ ಆಗಿದ್ದ ನೆನಪಿರಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯ’ ಸಿನಿಮಾ ಶತದಿನೋತ್ಸವ ಆಚರಿಸಿದೆ. ಪ್ರೇಮ್ ಸಿನಿಮಾ ರಂಗಕ್ಕೆ ಬಂದು 20 ವರ್ಷಗಳು ಪೂರೈಸಿದ ಸಂಭ್ರಮದಲ್ಲಿರುವಾಗ ‘ಪ್ರೇಮಂ ಪೂಜ್ಯಂ’ ನೂರು ದಿನಗಳ ಪ್ರದರ್ಶನ ಕಂಡಿದ್ದು, ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಹಾಗಾಗಿ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಹಾಗೂ ಚಿತ್ರೋದ್ಯಮದ ಸರ್ವರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಪ್ರೇಮ್, ಪ್ರಾಣ ಚಿತ್ರದ ಮೂಲಕ 2004ರಲ್ಲಿ ಹೀರೋ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದರು. ಇವರ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ಚಿತ್ರ ರತ್ನಜ ನಿರ್ದೇಶನದಲ್ಲಿ ಮೂಡಿ ಬಂದ ‘ನೆನಪಿರಲಿ’. ಎರಡನೇ ಸಿನಿಮಾದಲ್ಲಿಯೇ ಸ್ಟಾರ್ ಪಟ್ಟ ತಲುಪಿದ ನಟ ಇವರು. ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿಯೇ ಅಭಿಮಾನಿ ಬಳಗ ಇವರನ್ನು ‘ನೆನಪಿರಲಿ ಪ್ರೇಮ್’ ಎಂಬ ಹೆಸರಿನಿಂದಲೇ ಕರೆಯುವುದಕ್ಕೆ ಶುರುಮಾಡಿತು.ಎರಡು ದಶಕದ ವೃತ್ತಿ ಬದುಕಿನಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್, ದರ್ಶನ್, ಅನಂತ್ ನಾಗ್ ಮುಂತಾದ ಕಲಾವಿದರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ