ಕೊಯಮತ್ತೂರು(ತಮಿಳುನಾಡು): ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಅಪಘಾತದ ಸಿಸಿಟಿವಿ ದೃಶ್ಯವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಚಾಲಕನೊಬ್ಬ ತನ್ನದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಶಾಕಿಂಗ್ ಘಟನೆ ಬಯಲಾಗಿದೆ.
ಸೇಲಂ ನಿವಾಸಿಯಾದ ಲಾರಿ ಚಾಲಕ ಸುರೇಶ್ ಬಾಬು ಎಂಬಾತ ಮೃತ ದುರ್ದೈವಿ. ನಿನ್ನೆ (ಫೆ.17) ಚಾಲಕ ಸುರೇಶ್ ಬಾಬು ಸೇಲಂನಿಂದ ಕೊಯಮತ್ತೂರಿಗೆ ಲಾರಿಯಲ್ಲಿ ಸರಕುಗಳನ್ನು ಸಾಗಿಸುತ್ತಿದ್ದರು.
ತನ್ನದೇ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಚಾಲಕಈ ವೇಳೆ, ಕೊಯಮತ್ತೂರು ಸಮೀಪದ ಕರುಮಂಥಂಪಟ್ಟಿ ಎಂಬಲ್ಲಿ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದ್ದಾರೆ. ಆದರೆ, ಸುರೇಶ್ ಬಾಬು ಲಾರಿಯ ಎಂಜಿನ್ ಆಫ್ ಮಾಡಿರಲಿಲ್ಲ. ಲಾರಿ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಲಾರಿ ಇದ್ದಕ್ಕಿದ್ದಂತೆ ಚಲಿಸಲು ಶುರು ಮಾಡಿದೆ.
ಇದನ್ನು ಕಂಡು ಗಾಬರಿಗೊಂಡ ಸುರೇಶ್ ಲಾರಿಯನ್ನು ತನ್ನ ಕೈಯಿಂದ ನಿಲ್ಲಿಸಲು ಯತ್ನಿಸಿದಾಗ ಲಾರಿ ಆತನ ಮೇಲೆ ಹರಿದಿದ್ದು, ಸ್ಥಳದಲ್ಲೇ ಪ್ರಾಣ ತೆತ್ತಿದ್ದಾನೆ.
Laxmi News 24×7