Breaking News

ದೊಡ್ಡ ಗಣಪತಿ ದೇವಾಲಯಕ್ಕೆ ನೋಟಿಸ್ – ಸಿಟಿ ರವಿ ಪ್ರಶ್ನೆಗೆ ಉತ್ತರ ನೀಡಿದ ಆರಗ

Spread the love

ಬೆಂಗಳೂರು: ದೇವಾಲಯಗಳಲ್ಲಿ ಹೆಚ್ಚು ಸೌಂಡ್ ಇರುವಂತಹ ಧ್ವನಿವರ್ಧಕ ಬಳಸುವಂತಿಲ್ಲ. ಪೂಜೆ ಸಂದರ್ಭದಲ್ಲಿ ಡಮರುಗ, ಧ್ವನಿವರ್ಧಕ, ಭಾರೀ ಸದ್ದಾಗುವ ಘಂಟೆ ಹೊಡೆಯದಂತೆ ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತಾಗಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟೀಸ್ ನೀಡಿದ ವಿಚಾರ ಪ್ರಸ್ತಾಪಿಸಿದ್ದಾರೆ.

ಘಂಟೆ ಶಬ್ಧದಿಂದ, ಶಂಖನಾದದಿಂದ ಮಾಲಿನ್ಯ ಅಂತಾರೆ, ಇದೊಂದು ಹೊಸದು, ಘಂಟೆಯಿಂದ ಮಾಲಿನ್ಯ ಆಗುತ್ತಾ? ಯಾರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರೆ? ತಲತಲಾಂತರಗಳಿಂದಲೂ ಘಂಟೆ, ಶಂಖನಾದ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು ಅಂತಾ ಸಿ.ಟಿ.ರವಿ ಒತ್ತಾಯ ಮಾಡಿದ್ದಾರೆ. ಧ್ವನಿಗೂಡಿಸಿದ ಶಾಸಕ ರವಿಸುಬ್ರಮಣ್ಯ, ಇದು ಏಕೆ ಪದೇ ಪದೇ ಬರುತ್ತಿದೆ? ಇದರ ಹಿಂದೆ ಪಿತೂರಿ ಇರಬಹುದು. ಸರ್ಕಾರ ನಿಮ್ದೇ ಇದೆ, ಪಿತೂರಿ ಯಾರು ಮಾಡ್ತಾರೆ ಎಂದು ಶಿವಲಿಂಗೇಗೌಡ ಕಿಡಿ ಕಾರಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ