ಬಾಗಲಕೋಟೆ: ನಮ್ಮ ಪಕ್ಷದ ಶಾಸಕರು ಸಿಂಹದ ಮರಿಗಳಿದ್ದಂತೆ ಯಾರೂ ಕಾಂಗ್ರೆಸ್ಗೆ ಹೋಗಲ್ಲ, ಕಾಂಗ್ರೆಸ್ ನವರದ್ದು ಬರೀ ಗಿಣಿ ಭವಿಷ್ಯ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡದ ಸಚಿವ ಈಶ್ವರಪ್ಪ ಅವರು. ಬಿಜೆಪಿಯವರು ಎಷ್ಟು ಜನ ಬರ್ತಾರೆ, ಯಾವಾಗ ಬರ್ತಾರೆ ಅಂತಾ ಹೇಳಲ್ಲ, ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗಿಣಿ ಭವಿಷ್ಯದಲ್ಲಿ ಸ್ಪರ್ಧೆ ಮಾಡ್ತಿದ್ದಾರೆ. ನಮ್ಮ ಪಕ್ಷದ ಶಾಸಕರು ಸಿಂಹದ ಮರಿಗಳಿದ್ದಂತೆ. ಒಬ್ಬ ಶಾಸಕನು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Laxmi News 24×7