Breaking News

ಸವದಿ, ಕತ್ತಿ ಕಾಂಗ್ರೆಸ್‌ಗೆ ಬಂದರೆ ನಿಮಗೆ ತಿಳಿಸುತ್ತೇವೆ:

Spread the love

ಹರಿಹರ (ದಾವಣಗೆರೆ): ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಗೊತ್ತಾಗಲು ಒಂದು ವರ್ಷ ಬೇಕು. ಚುನಾವಣೆ ಹತ್ತಿರ ಬಂದಾಗ ಕೆಲವರು ಹೋಗೋದು, ಬರೋದು ಇದ್ದಿದ್ದೆ. ಈಗ ಊಹಪೋಹಗಳಷ್ಟೇ ಹರಿದಾಡುತ್ತವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

 

ಹರಿಹರದಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

‘ಕಾಂಗ್ರೆಸ್‌ಗೆ ಯಾರು ಬಂದರೂ ಬಿಟ್ಟರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಹಿಂದಿನ ಎರಡು ಮೂರು ಚುನಾವಣೆಗಳ ಫಲಿತಾಂಶ ನಮ್ಮ ಪರವಾಗಿ ಬಂದಿದೆ. ಇಂದು ಮುಂದಿನ ಚುನಾವಣೆಯ ದಿಕ್ಸೂಚಿ’ ಎಂದು ತಿಳಿಸಿದರು.

‘ಲಕ್ಷ್ಮಣ ಸವದಿ, ಉಮೇಶ್‌ ಕತ್ತಿ ಸಹಿತ ಯಾರೂ ಕಾಂಗ್ರೆಸ್‌ ಅನ್ನು ಸಂಪರ್ಕ ಮಾಡಿಲ್ಲ. ಅವರು ಬಂದರೆ ನಿಮಗೆ ತಿಳಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗೋಕಾಕ ಅಭಿವೃದ್ಧಿ ಆಗಿಲ್ಲ ಅಂದರೆ ನಾನು ಸ್ಥಳದಲ್ಲೇ ರಾಜೀನಾಮೆ ನೀಡುತ್ತೇನೆ’ ಎಂಬ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ‘ಗೋಕಾಕಕ್ಕೆ ಬಂದು ನೋಡಿದ್ರೆ ಗೊತ್ತಾಗುತ್ತದೆ. ನೀವೂ ಬಂದು ನೋಡಿ’ ಎಂದರು.


Spread the love

About Laxminews 24x7

Check Also

ಬೆಳಗಾವಿ ಡಿಸಿಸಿ ಬ್ಯಾಂಕ್ 4 ಕ್ಷೇತ್ರಗಳ ಫಲಿತಾಂಶ ಪ್ರಕಟ: 15 ದಿನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Spread the love ಬೆಳಗಾವಿ: ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ)ನ ನಾಲ್ಕು ಕ್ಷೇತ್ರಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ